alex Certify ಇಥಿಯೋಪಿಯಾದಲ್ಲಿ 2.3 ಲಕ್ಷ ವರ್ಷ ಹಳೆಯ ಮಾನವ ಪಳೆಯುಳಿಕೆ ಪತ್ತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಥಿಯೋಪಿಯಾದಲ್ಲಿ 2.3 ಲಕ್ಷ ವರ್ಷ ಹಳೆಯ ಮಾನವ ಪಳೆಯುಳಿಕೆ ಪತ್ತೆ

ಇಥಿಯೋಪಿಯಾದಲ್ಲಿ ಪತ್ತೆಯಾದ ಪ್ರಾಚೀನ ಮಾನವ ಪಳೆಯುಳಿಕೆಗಳು 2,30,000 ವರ್ಷಗಳಷ್ಟು ಹಳೆಯದಾಗಿರಬಹುದು ಎಂದು ತಜ್ಞರು ಅಧ್ಯಯನದಲ್ಲಿ ಬಹಿರಂಗಪಡಿಸಿದ್ದಾರೆ. ಪಳೆಯುಳಿಕೆಗಳನ್ನು ಓಮೋ I ಎಂದು ಕರೆಯಲಾಗುತ್ತದೆ.

1960 ರ ದಶಕದ ಉತ್ತರಾರ್ಧದಲ್ಲಿ ಮೊದಲು ಪತ್ತೆಯಾದ ಅವಶೇಷಗಳು ಹೋಮೋ ಸೇಪಿಯನ್ಸ್ ಪಳೆಯುಳಿಕೆಗಳ ಆರಂಭಿಕ ಉದಾಹರಣೆಗಳಲ್ಲಿ ಒಂದಾಗಿದೆ. ಆದಾಗ್ಯೂ, ಹಿಂದಿನ ಅಧ್ಯಯನಗಳು ಅವುಗಳನ್ನು 2,00,000 ವರ್ಷಗಳ ಹಿಂದಿನವು ಎಂದು ಅಂದಾಜಿಸಲಾಗಿತ್ತು.

ಹಲವು ರಾಜ್ಯಗಳಲ್ಲಿ ಶೀತಗಾಳಿಯ ಮುನ್ಸೂಚನೆ

ಆದರೆ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದ ಹೊಸ ಅಧ್ಯಯನವು 2,30,000 ವರ್ಷಗಳ ಹಿಂದೆ ಸಂಭವಿಸಿದ ಈ ಪ್ರದೇಶದಲ್ಲಿ ಬೃಹತ್ ಜ್ವಾಲಾಮುಖಿ ಸ್ಫೋಟಕ್ಕೆ ಮುಂಚಿನ ಅವಶೇಷಗಳ ಇರುವಿಕೆ ಸೂಚಿಸುತ್ತದೆ.

ಸಂಶೋಧಕರ ತಂಡವು ಪಳೆಯುಳಿಕೆಗಳಿಗೂ ಮೊದಲು ಪತ್ತೆಯಾದ ಕೆಸರಿನ ಮೇಲೆ ಮತ್ತು ಕೆಳಗೆ ಕಂಡುಬಂದ ಜ್ವಾಲಾಮುಖಿಯ ಬೂದಿ ಪದರಗಳ ರಾಸಾಯನಿಕ ಕುರುಹುಗಳ ಡೇಟಿಂಗ್ ಮಾಡಲಾಗಿದೆ.

ಆದರೆ ಈ ಅಧ್ಯಯನ ಇನ್ನೂ ಮುಗಿದಿಲ್ಲ ಎಂದು ತಜ್ಞರು ಹೇಳಿದ್ದಾರೆ. ಈಗಿನಂತೆ, ಹೊಸ ಸಂಶೋಧನೆಗಳು ಪೂರ್ವ ಆಫ್ರಿಕಾದಲ್ಲಿ ಹೋಮೋ ಸೇಪಿಯನ್ನರ ಕನಿಷ್ಠ ವಯಸ್ಸನ್ನು 30,000 ವರ್ಷಗಳಷ್ಟು ಹಿಂದಕ್ಕೆ ತಳ್ಳಿವೆ. ಆದಾಗ್ಯೂ, ಭವಿಷ್ಯದಲ್ಲಿ ಹೊಸ ಅಧ್ಯಯನಗಳು, ಪ್ರಾಯಶಃ ಈ ವಯಸ್ಸನ್ನು ಮತ್ತಷ್ಟು ಹಿಮ್ಮುಖವಾಗಿ ವಿಸ್ತರಿಸಬಹುದು.

ವಿಶ್ವದ ಅತ್ಯಂತ ಹಳೆಯ ಹೋಮೋ ಸೇಪಿಯನ್ಸ್ ಪಳೆಯುಳಿಕೆಗಳ ಆವಿಷ್ಕಾರ ಮಾಡಿರುವುದಾಗಿ 2017 ರಲ್ಲಿ ಪುರಾತತ್ವಶಾಸ್ತ್ರಜ್ಞರು ಘೋಷಿಸಿದರು. ಇದು ಮೊರಾಕೊದ ಜೆಬೆಲ್ ಇರ್ಹೌಡ್‌ನಲ್ಲಿ ಕಂಡು ಬಂದ 3,00,000 ವರ್ಷಗಳಷ್ಟು ಹಳೆಯದಾದ ತಲೆಬುರುಡೆಯಾಗಿತ್ತು.

ದಶಕಗಳಿಂದ, ವಿಜ್ಞಾನಿಗಳು ಪೂರ್ವ ಆಫ್ರಿಕಾದ ಅತ್ಯಂತ ಹಳೆಯ ಪಳೆಯುಳಿಕೆಗಳ ನಿಖರ ಕಾಲಮಾನ ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...