ಚಾಮರಾಜನಗರ: ಸಿಂಗಾನಲ್ಲೂರಿನಲ್ಲಿ ಮಳೆಯಿಂದಾಗಿ ಮನೆಗೋಡೆ ಕುಸಿದು ವೃದ್ಧೆ ಸಾವನ್ನಪ್ಪಿದ್ದಾರೆ. 85 ವರ್ಷದ ರಂಗಮ್ಮ ಮೃತಪಟ್ಟವರು ಎಂದು ಹೇಳಲಾಗಿದೆ.
ಮನೆ ಗೋಡೆ ಕುಸಿದು ಸ್ಥಳದಲ್ಲಿಯೇ ರಂಗಮ್ಮ ಮೃತಪಟ್ಟಿದ್ದಾರೆ. ರಂಗಮ್ಮ ಪುತ್ರಿ ಲಕ್ಷ್ಮಮ್ಮ, ಪುತ್ರ ಪುಟ್ಟರಂಗಯ್ಯ ಪಾರಾಗಿದ್ದಾರೆ. ಘಟನೆ ಸ್ಥಳಕ್ಕೆ ಮಾಜಿ ಶಾಸಕ ಆರ್. ನರೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.