ಬೆಳಕಿನ ಹಬ್ಬ ದೀಪಾವಳಿ ಬಂದೇ ಬಿಟ್ಟಿದೆ. ದೇಶದಾದ್ಯಂತ ಈ ಹಬ್ಬವನ್ನು ಬಹಳ ವೈಭವ, ಸಂಭ್ರಮದಿಂದ ಆಚರಿಸಲಾಗುತ್ತದೆ.
ಜನರು ತಮ್ಮ ಮನೆ ಮತ್ತು ಸುತ್ತಮುತ್ತಲಿನಲ್ಲಿ ದೀಪಗಳು, ಮಣ್ಣಿನ ದೀಪಗಳು, ಎಲ್ಇಡಿಗಳು ಮತ್ತು ಇತರ ಅಲಂಕಾರಿಕ ವಸ್ತುಗಳನ್ನಿಟ್ಟು ಅಲಂಕರಿಸುತ್ತಾರೆ. ಅಲ್ಲದೆ ಮನೆಗಳು ವರ್ಣರಂಜಿತ ರಂಗೋಲಿ ಮತ್ತು ಹೂಮಾಲೆಗಳಿಂದ ಅಲಂಕಾರಗೊಳ್ಳುತ್ತದೆ.
ಪ್ರತಿ ವರ್ಷ ದೀಪಾವಳಿಯಲ್ಲಿ ಹೊಸದು ಅಥವಾ ವಿಶಿಷ್ಟವಾದದ್ದು ಎಲ್ಲರನ್ನೂ ಗಮನ ಸೆಳೆಯುತ್ತದೆ. ಇದೀಗ ಮಹಿಳೆಯೊಬ್ಬರು ಎಲ್‌ಇಡಿ ಲೈಟ್ ಸೀರೆ ಧರಿಸಿರುವ ಹಳೆಯ ವಿಡಿಯೋವೊಂದು ಮತ್ತೆ ವೈರಲ್ ಆಗಿದೆ. ಎಲ್ಇಡಿ ದೀಪಗಳಿಂದ ಝಗಮಗಿಸುತ್ತಿರುವ ಬಿಳಿ ಬಣ್ಣದ ಸೀರೆಯುಟ್ಟಿರುವ ಮಹಿಳೆ ಎಲ್ಲರ ಗಮನ ಸೆಳೆದಿದೆ.
ಈ ದೀಪಾವಳಿ ರಂಗು ಹೆಚ್ಚಿಸುತ್ತೆ ಹೊಸ ʼರಂಗೋಲಿʼ
ಮಹಿಳೆ ಅಂಗಡಿಯೊಂದರ ಹೊರಗೆ ನಿಂತಿದ್ದರೆ, ಆಕೆಯ ಸೀರೆಯಲ್ಲಿನ ದೀಪಗಳು ಝಗಮಗ ಮಿನುಗುತ್ತಿವೆ. ಈ ವಿಡಿಯೋವನ್ನು ಮೊದಲ ಬಾರಿಗೆ 2020ರಲ್ಲಿ ಹಂಚಿಕೊಳ್ಳಲಾಗಿತ್ತು. ಇದೀಗ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
https://www.youtube.com/watch?v=ML10H3c3q9Y&t=92s