
ವೀಡಿಯೊದ ವಿಶೇಷತೆ ಏನು ಅಂದ್ರೆ, ಮಹಮ್ಮದ್ ಅಲಿ ಅವರು ಬಾಕ್ಸಿಂಗ್ ರಿಂಗ್ ನಲ್ಲಿ ಪುಟ್ಟ ಪೋರನೊಂದಿಗೆ ಹೋರಾಡುವ ವಿಡಿಯೋ ಇದಾಗಿದೆ.
ತಮಾಷೆಯಾಗಿ ಅಲಿ ಬಾಲಕನೊಂದಿಗೆ ಆಟವಾಡುತ್ತಾ ಸೋತವರಂತೆ ಕೆಳಗೆ ಬೀಳುತ್ತಾರೆ. ಬಾಲಕನಿಂದ ಮುತ್ತನ್ನು ಪಡೆದುಕೊಳ್ಳುತ್ತಾರೆ. ಈ ದೃಶ್ಯ ನೋಡ್ತಿದ್ದ ಜನ ಶಿಳ್ಳೆ, ಚಪ್ಪಾಳೆ ತಟ್ಟುತ್ತಾ ಖುಷಿಪಡುತ್ತಾರೆ. ಹಳೆಯ ಈ ವಿಡಿಯೋ ಮತ್ತೆ ವೈರಲ್ ಆಗಿದೆ.
ಈ ವೀಡಿಯೊವನ್ನು ಮಿನಿ ನಾಯರ್ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ ಮತ್ತು ಇದು ಇಲ್ಲಿಯವರೆಗೆ 1.6 ಮಿಲಿಯನ್ ವೀಕ್ಷಣೆಗಳನ್ನು ಹೊಂದಿದೆ. ನೆಟ್ಟಿಗರು ಅದ್ಭುತ ಬಾಕ್ಸರ್ ಮಹಮ್ಮದ್ ಅಲಿ ಎಂದು ಅವರನ್ನು ಹೊಗಳಿದ್ದಾರೆ.
https://twitter.com/DaraBhupendra/status/1599856286027243525?ref_src=twsrc%5Etfw