ಒಂದೇ ಒಂದು ಹಾವು ಎದುರಿಗೆ ಬಂದು ಹೆಡೆ ಎತ್ತಿ ಬುಸ್ ಅಂದ್ರೆ ಸಾಕು, ಜೀವ ಬಾಯಿಗೆ ಬಂದು ಬಿಡುತ್ತೆ. ಅಂಥಹದರಲ್ಲಿ ನೂರಾರು ಹಾವುಗಳು ಕಾಲ ಕೆಳಗೆಯೇ ಇದ್ದರೆ, ಹೇಗಿರುತ್ತೆ ಹೇಳಿ, ಇತ್ತೀಚೆಗೆ ವೈರಲ್ ಆಗಿರುವ ಈ ವಿಡಿಯೋ ನೋಡಿ, ನೀವು ಸಣ್ಣಗೆ ಕಂಪಿಸಿ ಬಿಡ್ತಿರಾ.
ನೋಡಿದ್ರಾ….. ಹೇಗೆ ಈ ವ್ಯಕ್ತಿ ಹಸಿರು ಬಣ್ಣದ ಗೋಣಿ ವ್ಯಕ್ತಿ ಚೀಲದಲ್ಲಿ ಹೇಗೆ ಹಾವನ್ನ ತುಂಬ್ಕೊಂಡು ಬಂದಿದ್ದಾನೆ. ಆ ನಂತರ ನಿರ್ಜನ ಪ್ರದೇಶಕ್ಕೆ ಹೋಗಿ, ಚೀಲದಲ್ಲಿದ್ದ ಹಾವನ್ನೆಲ್ಲ ಅಲ್ಲಿ ಸುರಿದು ಬಿಡ್ತಾನೆ. ನೂರಾರು ಹಾವುಗಳಿದ್ದರೂ, ಆ ವ್ಯಕ್ತಿ ನಿಂತ ಜಾಗದಿಂದ ಕಮಕ್ ಕಿಮಕ್ ಅನ್ನುವುದಿಲ್ಲ. ಅಷ್ಟೇ ಅಲ್ಲ ಆ ರಾಶಿಯ ನಡುವೆ ಕೈ ಕೂಡಾ ಹಾಕುತ್ತಾನೆ. ಈ ವಿಡಿಯೋ ನೋಡಿದವರೆಲ್ಲ ಈ ವ್ಯಕ್ತಿ ತೋರಿಸಿರುವ ಧೈರ್ಯಕ್ಕೆ ದಂಗಾಗಿದ್ದಾರೆ.
ಈ ವಿಡಿಯೋ ಜನವರಿ 14ರಂದು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಈ ವ್ಯಕ್ತಿ ಇಲ್ಲಿ ಹಾವುಗಳನ್ನ ರಕ್ಷಿಸುವ ಕೆಲಸ ಮಾಡುತ್ತಿದ್ದಾನೆ. ನಗರಗಳಲ್ಲಿ ಹಳ್ಳಿ ಪ್ರದೇಶಗಳಲ್ಲಿ ಸಿಕ್ಕ ಹಾವುಗಳನ್ನ ಹೀಗೆ ಚೀಲದಲ್ಲಿ ತುಂಬಿಕೊಂಡು ಬಂದು ಸುರಕ್ಷಿತವಾಗಿ ಅರಣ್ಯಕ್ಕೆ ಬಿಡುವ ಕೆಲಸ ಈಗ ಮಾಡುತ್ತಿದ್ದಾನೆ. ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಕೋಲಾಹಲವನ್ನೇ ಎಬ್ಬಿಸಿದ. ಇಲ್ಲಿಯವರೆಗೆ ಈ ವಿಡಿಯೋ 2525 ಲೈಕ್‌ಗಳನ್ನ ಪಡೆದುಕೊಂಡಿದೆ.
ವಾಸ್ತವವಾಗಿ ಇದು ಹಳೆಯ ವಿಡಿಯೋ ಆಗಿದ್ದು, ಇದನ್ನು ಮತ್ತೆ ಈಗ ಪೋಸ್ಟ್ ಮಾಡಲಾಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಈ ವ್ಯಕ್ತಿಯ ಧೈರ್ಯಕ್ಕೆ ಹಾಗೂ ಈತ ಮಾಡ್ತಿರೋ ಕೆಲಸಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.
https://youtu.be/fTlk2JE6ujM