ಬೃಹತ್ ಬಿಳಿ ಶಾರ್ಕ್ನ ವಿಡಿಯೋ ಮತ್ತೊಮ್ಮೆ ಜಾಲತಾಣದಲ್ಲಿ ಹಲ್ಚಲ್ ಸೃಷ್ಟಿ ಮಾಡಿದೆ. ನೋಡಲು ಭಯಾನಕವಾಗಿರುವ ಈ ಶಾರ್ಕ್ ಮೈ ಝುಂ ಎನ್ನಿಸುವಂತಿದೆ. ಸಮುದ್ರ ಜೀವಶಾಸ್ತ್ರಜ್ಞ ಮಾರಿಸಿಯೊ ಹೊಯೊಸ್ ಪಡಿಲ್ಲಾ ಅವರು ಇದರ ವಿಡಿಯೋ ಸೆರೆ ಹಿಡಿದಿದ್ದಾರೆ.
ಇದರ ವಿಡಿಯೋ ಕೆಲ ವರ್ಷಗಳ ಹಿಂದೆ ಭಾರಿ ವೈರಲ್ ಆಗಿತ್ತು. ಅದು ಪುನಃ ಈಗ ವೈರಲ್ ಆಗಿದೆ. ಡೀಪ್ ಬ್ಲೂ ಎಂಬ ಹೆಸರಿನ ದೊಡ್ಡ ಬಿಳಿ ಶಾರ್ಕ್ ಇದಾಗಿದೆ. ಇದರ ಮೂಗಿನ ಮೇಲೆ ಪಂಜರದಂತ ವಸ್ತು ಇದ್ದು, ಅದರಿಂದ ಒಮ್ಮೆ ಇರಿದರೆ ಜೀವಿಗಳು ಸತ್ತಂತೆಯೇ.
ವೀಡಿಯೊವನ್ನು 2015 ರಲ್ಲಿ ಮಾರಿಸಿಯೊ ಹೊಯೊಸ್ ಪಡಿಲ್ಲಾ ಅವರು ಹಂಚಿಕೊಂಡಿದ್ದರು. ಇವರುಗಳು ಪರಭಕ್ಷಕಗಳಾಗಿವೆ ಹಾಗೂ ಶಕ್ತಿ ಮತ್ತು ವೇಗಕ್ಕೆ ಹೆಸರುವಾಸಿಯಾಗಿದೆ. ದೊಡ್ಡ ಬಿಳಿ ಶಾರ್ಕ್ 15 ಅಡಿಯವರೆಗೆ ಉದ್ದುವಿರುತ್ತದೆ. ಕೆಲವೊಮ್ಮೆ ಇನ್ನೂ ಉದ್ದದ ಬಿಳಿಯ ಶಾರ್ಕ್ ನೋಡಬಹುದು ಎಂದು ಅವರು ಬರೆದಿದ್ದಾರೆ.
ಈಗ ವೈರಲ್ ಆಗಿರುವ ವಿಡಿಯೋದಲ್ಲಿ ಇರುವ ಶಾರ್ಕ್ ಸುಮಾರು 20 ಅಡಿ ಉದ್ದ ಮತ್ತು 5,500 ಪೌಂಡ್‌ಗಳಿಗಿಂತ ಹೆಚ್ಚು ತೂಗುತ್ತದೆ. ಇದಕ್ಕೆ 50 ವರ್ಷ ವಯಸ್ಸಾಗಿದೆ ಎಂದು ಭಾವಿಸಲಾಗಿದೆ.
https://www.youtube.com/watch?v=4cGjz_97kbA