27 ಅಂತಸ್ತಿನ ಕಟ್ಟಡದ ಮೇಲೆ ಪುಟ್ಟ ಬಾಲಕ ಒಂದು ಕಟ್ಟಡದಿಂದ ಮತ್ತೊಂದು ಕಟ್ಟಡಕ್ಕೆ ಜಿಗಿಯುವ ಎದೆ ನಡುಗಿಸುವ ವಿಡಿಯೋ ವೈರಲ್ ಆಗ್ತಿದೆ. ಚೀನಾದಲ್ಲಿ ಅತಿ ಎತ್ತರದ ಕಟ್ಟಡದ ಮೇಲೆ ನಿಂತು ಇಬ್ಬರು ಮಕ್ಕಳು ಈ ರೀತಿ ಮಾಡಿರುವುದು ಒಂದು ಕ್ಷಣ ಹೃದಯವನ್ನ ನಡುಗಿಸುತ್ತದೆ.
ಬಾಲಕನೊಬ್ಬ ಒಂದು ಕಟ್ಟಡದಿಂದ ಮತ್ತೊಂದು ಕಟ್ಟಡಕ್ಕೆ ಸಣ್ಣ ಅಂತರವಿರುವ ಜಾಗದಲ್ಲಿ ಜಂಪ್ ಮಾಡುತ್ತಾನೆ. ಈ ವೇಳೆ ಮತ್ತೊಂದು ಕಟ್ಟಡದಲ್ಲಿದ್ದ ಪುಟ್ಟ ಹುಡುಗ ಕೂಡ ಇದನ್ನು ನೋಡುತ್ತಾ ಖುಷಿ ಪಡುತ್ತಾನೆ. ಬಾಲಕ ಈ ರೀತಿ ಪದೇ ಪದೇ ಜಂಪ್ ಮಾಡಿದ್ದಾನೆ. ಕ್ಯಾಮೆರಾದಲ್ಲಿ ಸೆರೆಯಾಗಿರುವ ಈ ಹಳೆಯ ವಿಡಿಯೋ ಮತ್ತೆ ವೈರಲ್ ಆಗಿದೆ.
ವಿಡಿಯೋ ಹಳೆಯದೆಂದು ದೃಢೀಕರಿಸಿರುವ ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ (SCMP) ಪ್ರಕಾರ 2021 ರಲ್ಲಿ ಹುಬೈ ಪ್ರಾಂತ್ಯದಿಂದ ಈ ವಿಡಿಯೋ ಹೊರಬಿದ್ದಿದೆ.
ಕ್ಲಿಪ್ ಅನ್ನು ಟ್ವಿಟರ್‌ನಲ್ಲಿ ಓನ್ಲಿ ಬ್ಯಾಂಗರ್ಸ್ ಮತ್ತೆ ಹಂಚಿಕೊಂಡಿದ್ದಾರೆ ಮತ್ತು ಬಳಕೆದಾರರನ್ನು ಬೆಚ್ಚಿಬೀಳಿಸಿದೆ. ಇದು 2.3 ಮಿಲಿಯನ್ ವೀಕ್ಷಣೆಗಳನ್ನು ಮತ್ತು 18,000 ಕ್ಕೂ ಹೆಚ್ಚು ಲೈಕ್ಸ್ ಸಂಗ್ರಹಿಸಿದೆ.
ಕಟ್ಟಡಗಳಿರುವ ಹೌಸಿಂಗ್ ಸೊಸೈಟಿಯ ನಿವಾಸಿಗಳಲ್ಲೊಬ್ಬರು ಹುಡುಗರು ಅಪಾಯಕಾರಿ ಸಾಹಸಗಳನ್ನು ಮಾಡುತ್ತಿರುವುದನ್ನು ಗಮನಿಸಿದ ತಕ್ಷಣ ಸಿಬ್ಬಂದಿಗೆ ಕರೆ ಮಾಡಿದ್ದು, ಅವರನ್ನು ಸುರಕ್ಷಿತವಾಗಿ ಕೆಳಗೆ ಕರೆತರಲಾಯಿತು ಎಂದಿದೆ.
https://twitter.com/OnlyBangersEth/status/1643636391413272589?ref_src=twsrc%5Etfw%7Ctwcamp%5Etweetembed%7Ctwterm%5E1643636391413272589%7Ctwgr%5Ea3fcc530d1b88829420e67ed9470ebf028b75ab9%7Ctwcon%5Es1_&ref_url=https%3A%2F%2Fwww.ndtv.com%2Foffbeat%2Fold-video-captures-heart-stopping-moment-when-boy-leaps-across-gap-between-27-storey-buildings-in-china-3925144