alex Certify ಸರಸ್ವತಿಯ ಆಶೀರ್ವಾದ ಪಡೆಯುತ್ತಿರುವ ಲತಾ ಮಂಗೇಶ್ಕರ್‌ ರ ಹಳೆ ಫೋಟೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸರಸ್ವತಿಯ ಆಶೀರ್ವಾದ ಪಡೆಯುತ್ತಿರುವ ಲತಾ ಮಂಗೇಶ್ಕರ್‌ ರ ಹಳೆ ಫೋಟೋ ವೈರಲ್

ಭಾನುವಾರ ನಿಧನರಾದ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ನಿಧನಕ್ಕೆ ದೇಶಾದ್ಯಂತ ಸಂತಾಪ ವ್ಯಕ್ತವಾಗಿದ್ದು, ಹಾಡುಗಾರ್ತಿಯ ಸಾಮಾನ್ಯ ಅಭಿಮಾನಿಗಳಿಂದ ಹಿಡಿದು ದೇಶವಿದೇಶಗಳ ಸಂಗೀತ ಲೋಕದ ದಿಗ್ಗಜರಿಂದ ರಾಜಕೀಯ ನಾಯಕರವರೆಗೂ ಶೋಕದ ಸಂದೇಶಗಳು ಹರಿದು ಬರತೊಡಗಿವೆ.

ಕೋವಿಡ್-19 ವಿರುದ್ಧ ಚಿಕಿತ್ಸೆ ಪಡೆಯಲು ಜನವರಿ 8ರಂದು ಮುಂಬಯಿಯ ಬ್ರೀಚ್ ಕ್ಯಾಂಡಿ ಆಸ್ಪತ್ರೆಯ ಐಸಿಯುನಲ್ಲಿ ದಾಖಲಾಗಿದ್ದ 92ರ ವಯಸ್ಸಿನ ಗಾಯಕಿ ತಮ್ಮ ಹಾಡುಗಾರಿಕೆಯಿಂದ ’ಗಾನಕೋಗಿಲೆ’ ಎಂದೇ ಖ್ಯಾತರಾಗಿದ್ದರು.

‘ರಾತನ್ ಲಂಬಿಯಾನ್’ ಗೆ ಲಿಪ್ ಸಿಂಕ್ ಮಾಡಿದ ತಾಂಜೇನಿಯಾದ ಅಣ್ಣ-ತಂಗಿ: ವಿಡಿಯೋ ವೈರಲ್

ಇದೀಗ ಲತಾ ಮಂಗೇಶ್ಕರ್ ರು ಸರಸ್ವತಿ ದೇವಿಯ ಫೋಟೋ ಎದುರು ನಿಂತುಕೊಂಡು ಆ ಫೋಟೋಗೆ ಹೂವಿನ ಹಾರ ಹಾಕುತ್ತಿರುವ ಹಳೆ ಚಿತ್ರವೊಂದು ವೈರಲ್ ಆಗಿದೆ.

ಉತ್ತರ ಪ್ರದೇಶದ ಎಡಿಜಿ ನವ್ನೀತ್‌ ಸೇಕರಾ ಲತಾರ ಈ ಚಿತ್ರವನ್ನು ಶೇರ್‌ ಮಾಡಿದ್ದು, ’ಯುಗವೊಂದರ ಅಂತ್ಯ’ ಎಂದು ಕ್ಯಾಪ್ಷನ್ ಕೊಟ್ಟು, ಟ್ವಿಟರ್‌ನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...