
ಹಾವೇರಿ: ಹಳೇ ಬ್ಯಾಲೆಟ್ ಬಾಕ್ಸ್ ಗಳನ್ನು ಕದ್ದಿದ್ದ ಐವರು ಖದೀಮರನ್ನು ಹಾವೇರಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಸಂತೋಷ್ ಮಾಳಗಿ, ಮುತ್ತಪ್ಪ ದೇವಿಹೊಸೂರ್, ಗಣೇಶ್ ಹರಿಜನ, ಕೃಷ್ಣ ಹರಿಜನ, ಮೊಹಮ್ಮದ್ ಜಾವಿದ್ ಎಂದು ಗುರುತಿಸಲಾಗಿದೆ. ಬಂಧಿತರಿಂದ 27 ಬ್ಯಾಲೆಟ್ ಬಾಕ್ಸ್, 1 ಆಟೋ ವಶಕ್ಕೆ ಪಡೆಯಲಾಗಿದೆ.
ನವೆಂಬರ್ 13ರಂದು ಶಿಗ್ಗಾಂವಿ ಕ್ಷೇತ್ರದಲ್ಲಿ ನಡೆದಿದ್ದ ಉಪಚುನಾವಣೆಯ ವೇಳೆ ಹಳೇ ಬ್ಯಾಲೆಟ್ ಬಾಕ್ಸ್ ಕಳ್ಳತನ ಪ್ರಕರಣ ಭಾರಿ ಚರ್ಚೆಯಾಗಿತ್ತು. ಉಪಚುನಾವಣೆ ಮುಗಿದ ಮಾರನೆ ದಿನವೇ ಯತ್ನಿನಹಳ್ಳಿ ಬಳಿ ಕಾಲುವೆಯಲ್ಲಿ ಹಳೇ ಬ್ಯಾಲೆಟ್ ಬಾಕ್ಸ್ ಗಳು ಪತ್ತೆಯಗಿದ್ದವು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಇದೀಗ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.