
ಓಲಾ ಎಲೆಕ್ಟ್ರಿಕ್ ಸ್ಕೂಟರ್ ಬುಕ್ಕಿಂಗ್ ಗೆ ಉತ್ತಮ ಪ್ರತಿಕ್ರಿಯೆ ಸಿಗ್ತಿದೆ. ಓಲಾ ಕೆಲ ದಿನಗಳ ಹಿಂದೆ 499 ರೂಪಾಯಿಗೆ ಎಲೆಕ್ಟ್ರಿಕ್ ಸ್ಕೂಟರ್ ಬುಕ್ಕಿಂಗ್ ಶುರು ಮಾಡಿದೆ. ಇದ್ರ ನಂತ್ರ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಬುಕ್ಕಿಂಗ್ ಭರದಿಂದ ಸಾಗಿದೆ. 24 ಗಂಟೆಯಲ್ಲಿ 1 ಲಕ್ಷಕ್ಕೂ ಹೆಚ್ಚು ಬುಕ್ಕಿಂಗ್ ಆಗಿದೆ.
ಸ್ಕೂಟರ್ ಬುಕ್ಕಿಂಗ್ 1 ಲಕ್ಷಕ್ಕೆ ಏರ್ತಿದ್ದಂತೆ ಗ್ರಾಹಕರಿಗೆ ನೆರವಾಗಲು ಓಲಾ ಮುಂದಾಗಿದೆ. ಗ್ರಾಹಕರ ಮನೆಗೆ ಸ್ಕೂಟರ್ ತಲುಪಿಸುವು ಪ್ಲಾನ್ ನಲ್ಲಿ ಕಂಪನಿಯಿದೆ. ಮಾಧ್ಯಮ ವರದಿಗಳ ಪ್ರಕಾರ, ಓಲಾ, ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರಾಟಗಾರರಿಗೆ ಕಳುಹಿಸುವುದಿಲ್ಲ. ಅದನ್ನು ಗ್ರಾಹಕರ ಮನೆಗೆ ನೇರವಾಗಿ ತಲುಪಿಸಲಿದೆ. ಕಂಪನಿ ಹಾಗೂ ಗ್ರಾಹಕರ ಮಧ್ಯೆ ಯಾವುದೇ ಮಾರಾಟಗಾರನಿರುವುದಿಲ್ಲ.
ಇದಕ್ಕಾಗಿ ಕಂಪನಿ, ಪ್ರತ್ಯೇಕ ಲಾಜಿಸ್ಟಿಕ್ಸ್ ವಿಭಾಗವನ್ನು ರಚಿಸಿದ್ದು, ಇದು ನೇರ ಖರೀದಿಯ ಪ್ರಕ್ರಿಯೆಗೆ ಸಹಾಯ ಮಾಡಲಿದೆ. ಈ ಇಲಾಖೆಗಳು ಗ್ರಾಹಕರಿಂದ ಕಾಗದಪತ್ರಗಳು, ಸಾಲಗಳು, ಅರ್ಜಿಗಳನ್ನು ಸಂಗ್ರಹಿಸುತ್ತವೆ. ಓಲಾ ಎಲೆಕ್ಟ್ರಿಕ್ ಸ್ಕೂಟರ್ ಕೇವಲ 18 ನಿಮಿಷಗಳಲ್ಲಿ ಶೂನ್ಯದಿಂದ ಶೇಕಡಾ 50ರಷ್ಟು ಚಾರ್ಜ್ ಆಗಲಿದೆ. ಸ್ಕೂಟರ್ ಫುಲ್ ಚಾರ್ಜ್ ಆದಲ್ಲಿ ಸುಮಾರು 150 ಕಿ.ಮೀ. ಕ್ರಮಿಸಲಿದೆ. 80 ಸಾವಿರದಿಂದ 1.1 ಲಕ್ಷದವರೆಗೆ ಬೆಲೆ ನಿಗದಿಪಡಿಸಲಾಗಿದೆ.