ಓಲಾ, ಎಲೆಕ್ಟ್ರಿಕ್ ಸ್ಕೂಟರ್ ಮೂಲಕ ಸಾಕಷ್ಟು ಸುದ್ದಿ ಮಾರಿದೆ. ಓಲಾ ಎಲೆಕ್ಟ್ರಿಕ್ ಈಗ ದೇಶಾದ್ಯಂತ ಹೈಪರ್ ಚಾರ್ಜರ್ಸ್ ಹೆಸರಿನಲ್ಲಿ ಚಾರ್ಜಿಂಗ್ ನೆಟ್ವರ್ಕ್ ಸ್ಥಾಪಿಸಲು ಮುಂದಾಗಿದೆ. ಹೈಪರ್ಚಾರ್ಜರ್ ಮೂಲಕ ಓಲಾ ಇ-ಸ್ಕೂಟರನ್ನು 18 ನಿಮಿಷಗಳಲ್ಲಿ ಶೇಕಡಾ 50 ರಷ್ಟು ಚಾರ್ಜ್ ಮಾಡಬಹುದು. ಗ್ರಾಹಕರು 6 ತಿಂಗಳವರೆಗೆ ಇದರ ಲಾಭವನ್ನು ಉಚಿತವಾಗಿ ಪಡೆಯಬಹುದು.
ಓಲಾ ಎಲೆಕ್ಟ್ರಿಕ್ ಸಂಸ್ಥಾಪಕ ಮತ್ತು ಸಿಇಒ ಭವಿಶ್ ಅಗರ್ವಾಲ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಕಂಪನಿಯು ಚಾರ್ಜಿಂಗ್ ಮೂಲಸೌಕರ್ಯವನ್ನು ವಿಸ್ತರಿಸಲಿದೆ ಎಂದವರು ತಿಳಿಸಿದ್ದಾರೆ. ಓಲಾ ಈ ವರ್ಷ ಓಲಾ ಎಸ್ 1 ಮತ್ತು ಓಲಾ ಎಸ್ 1 ಪ್ರೊ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದೆ. ಕೆಲ ನಗರಗಳ ಗ್ರಾಹಕರ ಕೈಗೆ ಸ್ಕೂಟರ್ ಸಿಕ್ಕಿದೆ.
ಕಂಪನಿ ದೇಶದಲ್ಲಿ 4,000 ಕ್ಕೂ ಹೆಚ್ಚು ಚಾರ್ಜಿಂಗ್ ಪಾಯಿಂಟ್‌ಗಳನ್ನು ಸ್ಥಾಪಿಸುವ ಗುರಿಯನ್ನು ಹೊಂದಿದೆ. ಜೂನ್ ವೇಳೆಗೆ ಎಲ್ಲ ಗ್ರಾಹಕರಿಗೆ ಇದ್ರ ಸೇವೆ ಸಿಗಲಿದೆ. ಅಕ್ಟೋಬರ್‌ನಲ್ಲಿ, ಓಲಾ ಎಲೆಕ್ಟ್ರಿಕ್ ತನ್ನ ಮೊದಲ ಹೈಪರ್ಚಾರ್ಜರ್ ಬಿಡುಗಡೆ ಮಾಡುವುದಾಗಿ ಘೋಷಿಸಿತ್ತು. ಓಲಾ ಸ್ಕೂಟರ್ ಒಂದು ಚಾರ್ಜ್‌ನಲ್ಲಿ 75 ಕಿಲೋಮೀಟರ್ ವರೆಗೆ ಕ್ರಮಿಸುವ ಸಾಮರ್ಥ್ಯ ಹೊಂದಿದೆ. ಕಂಪನಿ ತನ್ನ ವೆಬ್‌ಸೈಟ್‌ನಲ್ಲಿ ನಗರವಾರು ಚಾರ್ಜಿಂಗ್ ನೆಟ್‌ವರ್ಕ್ ಉಲ್ಲೇಖಿಸಿದೆ.