ಮುಂಬೈ: ಈಗ ಎಲ್ಲೆಲ್ಲೂ ಎಲೆಕ್ಟ್ರಿಕ್ ಸ್ಕೂಟರ್ಗಳದ್ದೇ ಮಾತು. ಅದೇ ರೀತಿ ಓಲಾ ಕೂಡ ಇ-ವಾಹನದಲ್ಲಿ ಮುಂಚೂಣಿಯಲ್ಲಿದೆ ಓಲಾ- S1 Pro ನ ವಿತರಣೆಗಳು 2021 ರ ಡಿಸೆಂಬರ್‌ನಲ್ಲಿ ಪ್ರಾರಂಭವಾಗಿದ್ದು, ಜನರ ಆಕಾಂಕ್ಷೆಯ ಮೇರೆಗೆ ಇನ್ನಷ್ಟು ಹೊಸ ಹೊಸ ವೈಶಿಷ್ಟ್ಯಗಳನ್ನು ತರಲು ಓಲಾ ಮುಂದಾಗಿದೆ.
ಜನರು ಕೂಡ ಓಲಾ ಸ್ಕೂಟರ್‌ಗಳಿಗೆ ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಆದರೆ ಇದೀಗ ಮಾರುಕಟ್ಟೆಯಲ್ಲಿ ಪೈಪೋಟಿ ಹೆಚ್ಚಾಗಿರುವುದರಿಂದ ತನ್ನ ಅಗ್ರ ಸ್ಥಾನವನ್ನು ಉಳಿಸಿಕೊಳ್ಳಲು ಅತ್ಯಂತ ಅಗ್ಗವಾಗಿ ಹೊಸ ಇವಿ ಸ್ಕೂಟರ್ ಬಿಡುಗಡೆಗೆ ಸಜ್ಜಾಗಿದೆ. ಆಗಸ್ಟ್ 15 ರಂದು ಬಿಡುಗಡೆಯಾದ ತನ್ನ S1 ನೊಂದಿಗೆ, ಓಲಾ ತನ್ನ ಪ್ರಮುಖ-ಯೋಗ್ಯ ವೈಶಿಷ್ಟ್ಯಗಳನ್ನು ಒಳಗೊಂಡ ಸ್ಕೂಟರ್ ಅನ್ನು ರೂ. 99,999 ಕ್ಕೆ ಮಾರಾಟ ಮಾಡಿತ್ತು. ಈಗ ಸ್ಪರ್ಧೆ ಹೆಚ್ಚಿರುವ ಹಿನ್ನೆಲೆಯಲ್ಲಿ ಓಲಾ ತನ್ನ ಸಬ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯನ್ನು ದೀಪಾವಳಿಯಂದು ರೂ. 80 ಸಾವಿರಕ್ಕೆ ಬಿಡುಗಡೆ ಮಾಡಲಿದೆ.
ಓಲಾ ಸಿಇಒ ಭವಿಶ್ ಅಗರ್ವಾಲ್ ಈ ಕುರಿತು ಮಾಹಿತಿ ನೀಡಿದ್ದಾರೆ. ಅಕ್ಟೋಬರ್ 22 ಕ್ಕೆ ಎಸ್-1 ಎಲೆಕ್ಟ್ರಿಕಲ್ ಸ್ಕೂಟರ್ನ ಮುಂದುವರೆದ ಭಾಗವಾಗಿರುವ MoveOS 3.0 ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. ಈ ತಿಂಗಳು ನಮ್ಮ ಬಿಡುಗಡೆ ಕಾರ್ಯಕ್ರಮವನ್ನು ದೊಡ್ಡದಾಗಿ ಯೋಜಿಸಲಾಗಿದೆ ಎಂದೂ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ಓಲಾ ತನ್ನ ಉತ್ಪನ್ನಗಳನ್ನು ಹೆಚ್ಚು ಪ್ರೀಮಿಯಂ ವೈಶಿಷ್ಟ್ಯಗಳೊಂದಿಗೆ ಮಾರುಕಟ್ಟೆಯಲ್ಲಿ ಪರಿಚಯಿಸಿದೆ. ಜನರು ಕೂಡ ಓಲಾ ಸ್ಕೂಟರ್‌ಗಳಿಗೆ ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಆದರೆ ಇದೀಗ ಮಾರುಕಟ್ಟೆಯಲ್ಲಿ ಪೈಪೋಟಿ ಹೆಚ್ಚಾಗಿರುವುದರಿಂದ ತನ್ನ ಅಗ್ರ ಸ್ಥಾನವನ್ನು ಉಳಿಸಿಕೊಳ್ಳಲು ಅತ್ಯಂತ ಅಗ್ಗವಾಗಿ ಹೊಸ ಇವಿ ಸ್ಕೂಟರ್ ಬಿಡುಗಡೆಗೆ ಸಜ್ಜಾಗಿದೆ ಎಂದು ಭವಿಶ್ ತಿಳಿಸಿದ್ದಾರೆ.