ಪೆಟ್ರೋಲ್, ಡಿಸೇಲ್ ಬೆಲೆ ಹೆಚ್ಚಾಗ್ತಿದ್ದಂತೆ ಜನರು ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚು ಆದ್ಯತೆ ನೀಡ್ತಿದ್ದಾರೆ. ಇದೇ ಕಾರಣಕ್ಕೆ ಹೊಸ ಹೊಸ ಎಲೆಕ್ಟ್ರಿಕ್ ವಾಹನಗಳು ಮಾರುಕಟ್ಟೆಗೆ ಲಗ್ಗೆಯಿಡುತ್ತಿವೆ. ಓಲಾ ಕೂಡ ಎಲೆಕ್ಟ್ರಿಕ್ ವಾಹನವನ್ನು ಬಿಡುಗಡೆ ಮಾಡಿದೆ. ಓಲಾ ಎಲೆಕ್ಟ್ರಿಕ್ ವಾಹನಕ್ಕೆ ಈಗಾಗಲೇ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಈ ಮಧ್ಯೆ ಓಲಾ ಎಲೆಕ್ಟ್ರಿಕ್, 9 ಕಸ್ಟಮೈಸ್ಡ್ ಓಲಾ ಎಸ್ 1 ಪ್ರೊ ಸ್ಕೂಟರ್ ತಯಾರಿಸುವುದಾಗಿ ಹೇಳಿದೆ.
ಈ ಕಸ್ಟಮೈಸ್ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ನೆದರ್ಲ್ಯಾಂಡ್ಸ್ ರಾಯಭಾರ ಕಚೇರಿಯ ವಿಶೇಷ ಆದೇಶದ ಮೇರೆಗೆ ತಯಾರಿಸಲಾಗುತ್ತಿದೆ. ಈ 9 ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಭಾರತದಲ್ಲಿರುವ ನೆದರ್‌ಲ್ಯಾಂಡ್‌ನ 3 ರಾಜತಾಂತ್ರಿಕ ಕಾರ್ಯಾಚರಣೆಗಳಲ್ಲಿ ಬಳಸಲಾಗುವುದು.
ಭಾರತದಲ್ಲಿದೆ ಜಗತ್ತಿನ ಅತಿ ಸ್ವಚ್ಛ ನದಿ; ಜಲಶಕ್ತಿ ಸಚಿವಾಲಯ ಟ್ವೀಟ್ ಮಾಡಿದ ಫೋಟೋಗೆ ನೆಟ್ಟಿಗರು ಫಿದಾ
ಓಲಾದ ಈ ಸ್ಕೂಟರ್‌ಗಳು, ನೆದರ್‌ಲ್ಯಾಂಡ್‌ನ ಅಧಿಕೃತ ಬಣ್ಣ ಕಿತ್ತಳೆ ಛಾಯೆಯಲ್ಲಿ ತಯಾರಾಗಲಿವೆ. ಸ್ಕೂಟರ್‌ಗಳು ನೆದರ್‌ಲ್ಯಾಂಡ್‌ನ ಅಧಿಕೃತ ಲೋಗೋವನ್ನು ಹೊಂದಿರುತ್ತದೆ. ಓಲಾ ಇದಕ್ಕೆ ಡಚ್ ಆರೆಂಜೆ ನಾಮಕರಣ ಮಾಡಿದೆ.
ಓಲಾ ಎಸ್ 1 ಪ್ರೋ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ನವದೆಹಲಿಯಲ್ಲಿರುವ ನೆದರ್‌ಲ್ಯಾಂಡ್ಸ್ ರಾಯಭಾರ ಕಚೇರಿ ಮತ್ತು ಮುಂಬೈ, ಬೆಂಗಳೂರಿನ ಕಾನ್ಸುಲೇಟ್ ಜನರಲ್‌ಗೆ ತಲುಪಿಸಲಾಗುವುದು. ಓಲಾ ಮುಂದಿನ ವರ್ಷ ಯುರೋಪ್, ಯುಕೆ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಆಗ್ನೇಯ ಏಷ್ಯಾ ಮತ್ತು ಇತರ ಮಾರುಕಟ್ಟೆಗಳಲ್ಲಿ ತನ್ನ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಿಡುಗಡೆ ಮಾಡುವ ಪ್ಲಾನ್ ಮಾಡಿದೆ. ಕಂಪನಿ ಸದ್ಯ ತನ್ನ ಗ್ರಾಹಕರಿಗೆ ಟೆಸ್ಟ್ ಡ್ರೈವ್ ನೀಡ್ತಿದೆ. ಮುಂದಿನ ವಾರದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಗ್ರಾಹಕರ ಕೈ ಸೇರಲಿದೆ ಎನ್ನಲಾಗ್ತಿದೆ.