ಓಲಾ ಎಲೆಕ್ಟ್ರಿಕ್ ದ್ವಿಚಕ್ರ ವಾಹನವು ಸಾಕಷ್ಟು ಸಂಚಲನ ಸೃಷ್ಟಿಸಿದೆ. ಹೊಸತನಗಳಿಂದಲೇ ಗಮನ ಸೆಳೆಯುತ್ತಿರುವ ಓಲಾ ಎಲೆಕ್ಟ್ರಿಕ್ ಇದೀಗ ತನ್ನ ಗ್ರಾಹಕರಿಗೆ ಒಂದು ಸರ್ಪ್ರೈಸ್ ನೀಡುತ್ತಿದೆ.
ಓಲಾ ಎಲೆಕ್ಟ್ರಿಕ್ ತಮಿಳುನಾಡಿನಲ್ಲಿರುವ ತನ್ನ ಫ್ಯಾಕ್ಟರಿ ಬಾಗಿಲುಗಳನ್ನು ಎಸ್1 ಖರೀದಿಸಿದ ಎಲ್ಲಾ ಗ್ರಾಹಕರಿಗೆ ತೆರೆಯುತ್ತಿದೆ. ಬರೋಬ್ಬರಿ ಐವತ್ತು ಸಾವಿರಕ್ಕಿಂತ ಹೆಚ್ಚು ಗ್ರಾಹಕರಿಗೆ ಆಹ್ವಾನಿಸಿದೆ.
ಜೂನ್ 19 ರ ಭಾನುವಾರದಂದು ಓಲಾ ಫ್ಯೂಚರ್ ಫ್ಯಾಕ್ಟರಿಯಲ್ಲಿ ನಮ್ಮ ಗ್ರಾಹಕರ ಕಾರ್ಯಕ್ರಮಕ್ಕಾಗಿ, 1000 ಗ್ರಾಹಕರನ್ನು ಆಹ್ವಾನಿಸುವುದು ಹಿಂದಿನ ಯೋಜನೆಯಾಗಿತ್ತು. ಈಗ ನಾವು ನಮ್ಮ ಎಲ್ಲಾ ಓಲಾ S1 ಗ್ರಾಹಕರನ್ನು ಆಹ್ವಾನಿಸಲು ನಿರ್ಧರಿಸಿದ್ದೇವೆ, 50,000 ಕ್ಕಿಂತ ಹೆಚ್ಚು ಮಂದಿಗೆ ನಾವು ಫ್ಯಾಕ್ಟರಿ ಪ್ರವಾಸ ಹಮ್ಮಿಕೊಂಡಿದ್ದು, ಇದೇ ವೇಳೆ ಒಎಸ್ 2 ಅನಾವರಣಗೊಳಿಸುವ ಉದ್ದೇಶ ಹೊಂದಿದ್ದೇವೆ ಎಂದು ಓಲಾ ಎಲೆಕ್ಟ್ರಿಕ್ ಸಿಇಒ ಭವಿಶ್ ಅಗರ್ವಾಲ್ ಹೇಳಿದ್ದಾರೆ.