ಕಳೆದ ಆರು ತಿಂಗಳಿನಿಂದ ಮಾರುಕಟ್ಟೆಯಲ್ಲಿ ಓಲಾ ಎಲೆಕ್ಟ್ರಿಕ್ ಬೈಕ್ನದ್ದೇ ಸುದ್ದಿ ಎಂಬಂತಾಗಿದೆ.ತಮಿಳುನಾಡಿನಲ್ಲಿ ವಿಶ್ವದ ಅತಿದೊಡ್ಡ ದ್ವಿಚಕ್ರ ವಾಹನ ಕಾರ್ಖಾನೆ ಆರಂಭದಿಂದ ಹಿಡಿದು ದೇಶಾದ್ಯಂತ ಹೈಪರ್ ಚಾರ್ಜಿಂಗ್ ನೆಟ್ವರ್ಕ್ ಸ್ಥಾಪನೆ ಬಗ್ಗೆ ಘೋಷಣೆ ಮಾಡುವವರೆಗೂ ಓಲಾ ಮುನ್ನಡೆಯನ್ನ ಸಾಧಿಸುತ್ತಾ ಬಂದಿದೆ. ಇದೀಗ ಓಲಾ ಕಂಪನಿಯ ಸಿಇಓ ಭವೀಶ್ ಅಗರ್ವಾಲ್ ತಾವು ಎಲೆಕ್ಟ್ರಿಕ್ ಸ್ಕೂಟರ್ ರೈಡ್ ಮಾಡುತ್ತಿರೋ ವಿಡಿಯೋವನ್ನ ಟ್ವಿಟರ್ನಲ್ಲಿ ಶೇರ್ ಮಾಡುವ ಮೂಲಕ ಶೀಘ್ರದಲ್ಲೇ ಮಾರುಕಟ್ಟೆಗೆ ದಾಂಗುಡಿ ಇಡಲಿದ್ದೇವೆ ಎಂಬ ಸುಳಿವನ್ನ ನೀಡಿದ್ದಾರೆ.
ಚಿಲ್ಲರೆ ಹಾಗೂ ಸಗಟು ವ್ಯಾಪಾರಿಗಳಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್
ವಿಡಿಯೋದಲ್ಲಿ ಅಗರ್ವಾಲ್ ಬೆಂಗಳೂರಿನ ರಸ್ತೆಗಳಲ್ಲಿ ಓಲಾ ಎಲೆಕ್ಟ್ರಿಕ್ ಸ್ಕೂಟರ್ ರೈಡ್ ಮಾಡ್ತಿರೋದನ್ನ ಕಾಣಬಹುದಾಗಿದೆ. ಅಲ್ಲದೇ ದೊಡ್ಡ ಅಂಡರ್ಸ್ಟೋರೇಜ್ ಸಾಮರ್ಥ್ಯ ಹೊಂದಿರುವ ಈ ಸ್ಕೂಟರ್ನಲ್ಲಿ 2 ಹೆಲ್ಮೆಟ್ಗಳನ್ನ ಇಡಲು ಸ್ಥಳಾವಕಾಶವಿದೆ. ಹಾಗೂ ಪ್ರತಿ ಗಂಟೆಗೆ 60 ಕಿಲೋಮೀಟರ್ ವೇಗದಲ್ಲಿ ಓಡುತ್ತದೆ. ಸ್ಕೂಟರ್ನಲ್ಲಿ ಸಾಮಾನ್ಯ ಗಾತ್ರದ ಎಲೆಕ್ಟ್ರಿಕ್ ಮೋಟಾರ್ ಹಾಗೂ ಬ್ಯಾಟರಿಯನ್ನ ಇಡಲಾಗಿದೆ.