
ಓಲಾ ಎಲೆಕ್ಟ್ರಿಕ್ ಸ್ಕೂಟರ್ ನಿರೀಕ್ಷೆಯಲ್ಲಿದ್ದವರಿಗೊಂದು ಬೇಸರದ ಸುದ್ದಿಯಿದೆ. ಓಲಾ ಸ್ಕೂಟರ್ ಗೆ ಇನ್ನಷ್ಟು ದಿನ ಕಾಯಬೇಕಿದೆ. ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಓಲಾ ಎಲೆಕ್ಟ್ರಿಕ್, ಆನ್‌ಲೈನ್ ಬುಕಿಂಗ್ ದಿನಾಂಕವನ್ನು ಡಿಸೆಂಬರ್ 16ರವರೆಗೆ ವಿಸ್ತರಿಸಿದೆ.
ಎಲೆಕ್ಟ್ರಿಕ್ ಸ್ಕೂಟರ್‌ಗಳಾದ ಓಲಾ ಎಸ್ 1, ಓಲಾ ಎಸ್ 1 ಪ್ರೊ ವಿತರಣೆ ಸದ್ಯಕ್ಕಿಲ್ಲ ಎನ್ನಲಾಗಿದೆ. ಓಲಾ ಎಲೆಕ್ಟ್ರಿಕ್ ಸ್ಕೂಟರ್‌ನ ಟೆಸ್ಟ್ ರೈಡ್ ಶೀಘ್ರದಲ್ಲೇ ಶುರುವಾಗಲಿದೆ ಎಂದು ಕಂಪನಿ ಈ ಹಿಂದೆಯೇ ಹೇಳಿತ್ತು. ಎಲೆಕ್ಟ್ರಿಕ್ ಚಿಪ್ ಇಲ್ಲದ ಕಾರಣ ಸ್ಕೂಟರ್ ಉತ್ಪಾದನೆಗೆ ತೊಂದರೆಯಾಗುತ್ತಿದೆ ಎನ್ನಲಾಗ್ತಿದೆ. ಸದ್ಯ ಇಡೀ ಆಟೋಮೊಬೈಲ್ ಉದ್ಯಮವು ಎಲೆಕ್ಟ್ರಿಕ್ ಚಿಪ್‌ಗಳ ಕೊರತೆಯನ್ನು ಎದುರಿಸುತ್ತಿದೆ.
ಓಲಾ ಎಲೆಕ್ಟ್ರಿಕ್ ನ ಓಲಾ ಎಸ್ 1 ಸ್ಕೂಟರ್ ಮತ್ತು ಓಲಾ ಎಸ್ ಒನ್ ಪ್ರೊ ಎಬೆಲೆ ಕ್ರಮವಾಗಿ 85 ಸಾವಿರದಿಂದ 1.10 ಲಕ್ಷ ರೂಪಾಯಿಯಿದೆ. ದೆಹಲಿಯಲ್ಲಿ ಓಲಾ ಎಸ್ 1 ಎಲೆಕ್ಟ್ರಿಕ್ ಸ್ಕೂಟರ್ ಬೆಲೆ 85,099 ರೂಪಾಯಿಯಾಗಿದೆ. ಓಲಾ ಎಸ್ 1 ಪ್ರೋ ಬೆಲೆ 1,10,149 ರೂಪಾಯಿಯಾಗಿದೆ.
ಕೇವಲ 499 ರೂಪಾಯಿ ಪಾವತಿಸಿ ಆನ್‌ಲೈನ್‌ನಲ್ಲಿ ಈ ಸ್ಕೂಟರ್ ಬುಕ್ ಮಾಡಬಹುದು ಈ ಸ್ಕೂಟರ್ ಕೇವಲ 2,999 ರೂಪಾಯಿ ಇಎಂಐಗೆ ಖರೀದಿಸಬಹುದು. ಆನ್‌ಲೈನ್ ಬುಕಿಂಗ್‌ಗಾಗಿ ಓಲಾ ಎಲೆಕ್ಟ್ರಿಕ್‌ನ ಅಧಿಕೃತ ವೆಬ್‌ಸೈಟ್ www.olaelectric.com ಗೆ ಭೇಟಿ ನೀಡಬೇಕು.