ನವದೆಹಲಿ: ದೇಶದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಕ್ಷೇತ್ರದಲ್ಲಿ ಹೊಸ ಹವಾ ಸೃಷ್ಟಿಸಿದ ಓಲಾ ಎಲೆಕ್ಟ್ರಿಕ್ ತನ್ನ ಎಲೆಕ್ಟ್ರಿಕ್ ಸ್ಕೂಟರ್ಗಳ ಬುಕಿಂಗ್ಗಾಗಿ ಹೊಸ ಖರೀದಿ ವಿಂಡೋವನ್ನು ತೆರೆಯುತ್ತಿದೆ.
ಓಲಾ ಎಸ್ ಒನ್ ಪ್ರೊ ಮಾತ್ರ ಈಗ ಖರೀದಿಸಲು ಅವಕಾಶ ನೀಡಲಾಗಿದೆ. ಏಕೆಂದರೆ ಎಸ್ ಒನ್ ಉತ್ಪಾದನೆಯಲ್ಲಿ ತಾತ್ಕಾಲಿಕ ಸ್ಥಗಿತದಿಂದಾಗಿ ಖರೀದಿಗೆ ಅವಕಾಶ ನೀಡುವುದಿಲ್ಲ.
500 ರೂ. ಪಾವತಿಸಿ ಕಾಯ್ದಿರಿಸಿದ ಖರೀದಿದಾರರು ಈ ಖರೀದಿ ವಿಂಡೋದಲ್ಲಿ ಸ್ಕೂಟರ್ ಖರೀದಿಸಲು ಅವಕಾಶವನ್ನು ಪಡೆಯುತ್ತಾರೆ ಎಂದು ಸಿಇಒ ಭವಿಷ್ ಘೋಷಿಸಿದರು. ವಾರಾಂತ್ಯದಲ್ಲಿ ಬುಕಿಂಗ್ ವಿಂಡೋ ತೆರೆದಿರುತ್ತದೆ ಎಂದು ಓಲಾ ಎಲೆಕ್ಟ್ರಿಕ್ ಹೇಳಿದೆ.
BIG NEWS: ಪರಿಷತ್ ಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಹೆಸರು ಪ್ರಕಟ; ಬಿ.ವೈ.ವಿಜಯೇಂದ್ರಗೆ ನಿರಾಸೆ
ಎಲೆಕ್ಟ್ರಿಕ್ ಸ್ಕೂಟರ್ಗಳನ್ನು ಬಿಡುಗಡೆ ಮಾಡಿದ ನಂತರ ಮೂರನೇ ಖರೀದಿ ವಿಂಡೋ ಇದಾಗಿದೆ. ಓಲಾ ಈ ವರ್ಷದ ಮಾರ್ಚ್ 17 ಮತ್ತು 18 ರ ನಡುವೆ ತನ್ನ ಕೊನೆಯ ಖರೀದಿ ವಿಂಡೋವನ್ನು ತೆರೆಯಿತು ಮತ್ತು ಮುಂದಿನ ಬಾರಿ ಬೆಲೆ ಹೆಚ್ಚಿಸುವುದಾಗಿ ಘೋಷಿಸಿತ್ತು.
ನಿರೀಕ್ಷೆಯಂತೆ ಎಸ್1 ಪ್ರೊ ಬೆಲೆಯಲ್ಲಿ 10 ಸಾವಿರ ರೂ. ಹೆಚ್ಚಳ ಇರಲಿದೆ. ಎಸ್1 ಪ್ರೊ ಮೊದಲು ರೂ. 1.29 ಲಕ್ಷ (ಎಕ್ಸ್ ಶೋ ರೂಂ, ಫೇಮ್ II ಸಬ್ಸಿಡಿ ಹೊರತುಪಡಿಸಿ) ಬೆಲೆಯನ್ನು ಹೊಂದಿದೆ, ಇದನ್ನು ಈಗ ರೂ. 1.39 ಲಕ್ಷಕ್ಕೆ ಹೆಚ್ಚಿಸಲಾಗಿದೆ.
ಈ ಸ್ಕೂಟರ್ಗಳ ವಿತರಣೆಯನ್ನು ‘ಹೈಪರ್ ಮೋಡ್’ ನಲ್ಲಿ ಮಾಡಲಾಗುತ್ತದೆ ಎಂದು ಸಿಇಒ ಭರವಸೆ ನೀಡಿದ್ದಾರೆ. ಓಲಾ ಎಲೆಕ್ಟ್ರಿಕ್ ಈಗಾಗಲೇ ಭಾರತದಾದ್ಯಂತ ಐದು ನಗರಗಳಲ್ಲಿ ಟೆಸ್ಟ್ ರೈಡ್ ಶಿಬಿರಗಳನ್ನು ಆರಂಭಿಸಿದೆ.