
ಎಲೆಕ್ಟ್ರಿಕ್ ದ್ವಿಚಕ್ರ ವಾಹನದಲ್ಲಿ ವಿಶ್ವದ ಗಮನ ಸೆಳೆದಿರುವ ಓಲಾ ಈಗ ಕಾರು ಉತ್ಪಾದನೆಯತ್ತ ತನ್ನ ಗಮನ ಹರಿಸಿದೆ.
ಓಲಾ ಎಲೆಕ್ಟ್ರಿಕ್ ಕಾರು ಪರೀಕ್ಷೆ ಪ್ರಾರಂಭಿಸಿದ್ದು, ಇದು ಸುಮಾರು ಎರಡು ವರ್ಷಗಳಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಿದೆ ಎಂದು ಓಲಾ ಸಂಸ್ಥಾಪಕ ಮತ್ತು ಸಿಇಒ ಭವಿಶ್ ಅಗರ್ವಾಲ್ ಹೇಳಿಕೊಂಡಿದ್ದಾರೆ.
ಇದು ವಾಹನವು ಸ್ವಯಂ ಚಾಲಿತ ಕಾರ್ ಆಗಿದ್ದು, ಅದು ತಾನಿರುವ ಪರಿಸರವನ್ನು ಗ್ರಹಿಸುವ ಮತ್ತು ಕಡಿಮೆ ಮಾಲಿನ್ಯ ಹೊರಸೂಸುವ, ಯಾವುದೇ ಮಾನವ ಹಸ್ತಕ್ಷೇಪ ಇಲ್ಲದೇ ಸುರಕ್ಷಿತವಾಗಿ ಚಲಿಸುವ ಸಾಮರ್ಥ್ಯವನ್ನು ಹೊಂದಿರುವಂತೆ ಸಿದ್ಧಪಡಿಸಲಾಗುತ್ತಿದೆ.
ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಓಲಾ ಫ್ಯೂಚರ್ ಫ್ಯಾಕ್ಟರಿಯಲ್ಲಿ ಮಾತನಾಡಿರುವ ಅಗರ್ವಾಲ್, ಓಲಾ ದೇಶೀಯವಾಗಿ ಅಭಿವೃದ್ಧಿಪಡಿಸಿದ ತಂತ್ರಜ್ಞಾನದೊಂದಿಗೆ ಮಾಸ್ ಲೆವೆಲ್ ( ಸಾಮಾನ್ಯ ಜನರ ಬಳಕೆಗೆ) ವಾಹನವನ್ನು ಬಿಡುಗಡೆ ಮಾಡಲು ಎದುರು ನೋಡುತ್ತಿದೆ ಎಂದು ಹೇಳಿದರು.
ಈ ರಾಶಿಯವರಿಗೆ ಇಂದು ಇರಲಿದೆ ಲಾಭದಾಯಕ ದಿನ
ಓಲಾ ಎಲೆಕ್ಟ್ರಿಕ್ ಸುಮಾರು ಆರು ತಿಂಗಳ ಹಿಂದೆ ಈ ವಾಹನವನ್ನು ಪರೀಕ್ಷೆ ಪ್ರಾರಂಭವಾಗಿದೆ. ಅದನ್ನು 2023ರ ಕೊನೆಯಲ್ಲಿ ಅಥವಾ 2024ರ ಆರಂಭದಲ್ಲಿ ಜಾಗತಿಕ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತದೆ ಎಂದು ಅವರು ತಿಳಿಸಿದರು.
ಸುಮಾರು 10 ಲಕ್ಷ ರೂಪಾಯಿಗೆ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆ ಮಾಡುವ ಗುರಿ ಹೊಂದಿದ್ದು, ಹೆಚ್ಚಿನ ಜನರು ಖರೀದಿಸಬಹುದು ಎಂದು ಅಭಿಪ್ರಾಯಪಟ್ಟರು.
ತಮಿಳುನಾಡಿನ ಪೋಚಂಪಲ್ಲಿ ಪಟ್ಟಣದಲ್ಲಿರುವ ತನ್ನ 500 ಎಕರೆ ಪ್ಲಾಂಟ್‌ನಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಉತ್ಪಾದನಾ ಘಟಕದಲ್ಲಿ, ಕಂಪನಿಯು ಸೆಲ್ಫ್ ಡ್ರೈವಿಂಗ್ ವಾಹನ ಪ್ರದರ್ಶಿಸಿದೆ.
ಓಲಾ ಎಲೆಕ್ಟ್ರಿಕ್ ಈ ವರ್ಷದ ಕೊನೆಯಲ್ಲಿ ಕಡಿಮೆ ಬೆಲೆಯ ಓಲಾ ಎಸ್ ಒನ್ ಸ್ಕೂಟರ್ ಬಿಡುಗಡೆ ಮಾಡಲು ಯೋಜಿಸುತ್ತಿದೆ ಎಂದು ಸಹ ಅಗರ್ವಾಲ್ ಹೇಳಿದರು.