ಎಲೆಕ್ಟ್ರಿಕ್ ವಾಹನ ಕ್ಷೇತ್ರದಲ್ಲಿ ಅಬ್ಬರಿಸುತ್ತಿರುವ ಓಲಾ ಹೊಸ ಹೊಸ ಮೈಲುಗಲ್ಲುಗಳನ್ನು ಸ್ಥಾಪಿಸುತ್ತಾ ಮುಂದೆ ಸಾಗುತ್ತಿದೆ. ಈವರೆಗೆ ಓಲಾ ಎಲೆಕ್ಟ್ರಿಕ್ ದೇಶದ ವಿವಿಧ ಭಾಗಗಳಲ್ಲಿ 50,000ಕ್ಕೂ ಹೆಚ್ಚು ಗ್ರಾಹಕರಿಗೆ ಸ್ಕೂಟರ್‌ಗಳನ್ನು ಪೂರೈಸಿದೆ.
ಓಲಾ ಎಲೆಕ್ಟ್ರಿಕ್ ಶುಕ್ರವಾರ 2022-23ನೇ ಆರ್ಥಿಕ ಸಾಲಿನ ಮೊದಲ ಎರಡು ತಿಂಗಳಲ್ಲಿ 500 ಕೋಟಿಗೂ ಮೀರಿ ಆದಾಯ ಗಳಿಸಿದೆ.
ಕಂಪನಿಯ ವಾಹನ ಉತ್ಪಾದನೆ, ವಿತರಣೆ ನಿಧಾನವಿದೆ ಎಂಬ ವರದಿಗಳ ನಡುವೆಯೂ, ಓಲಾ ಎಲೆಕ್ಟ್ರಿಕ್ ಈ ವರ್ಷದ ಅಂತ್ಯದ ವೇಳೆಗೆ 1 ಬಿಲಿಯನ್ ಯುಎಸ್‌ಡಿ (ಸುಮಾರು ರೂ. 7,800 ಕೋಟಿ) ಆದಾಯ ಮೀರುವ ಹಾದಿಯಲ್ಲಿದೆ ಎಂದು ಹೇಳಿಕೊಂಡಿದೆ.
ಇವಿಯ ಮೇಲೆ ಗ್ರಾಹಕರ ವಿಶ್ವಾಸವು ಬೆಳೆಯುತ್ತಲೇ ಇರುವುದರಿಂದ, ಭವಿಷ್ಯದ ಮುನ್ಸೂಚನೆಯು ಓಲಾ ಎಲೆಕ್ಟ್ರಿಕ್‌ಗೆ ಇನ್ನಷ್ಟು ಬಲಿಷ್ಠವಾಗಿ ಬೆಳೆಯುವ ಅವಕಾಶ ಕಾಣಿಸಿದೆ.
ಕೃಷ್ಣಗಿರಿಯ ಓಲಾ ಫ್ಯೂಚರ್ ಫ್ಯಾಕ್ಟರಿಯಲ್ಲಿ ದಿನಕ್ಕೆ 1,000 ಯೂನಿಟ್ ಉತ್ಪಾದನಾ ಸಾಮರ್ಥ್ಯ ಇದ್ದು, ಅರ್ಡರ್ ಕೂಡ ಸಾಕಷ್ಟಿದೆ. ಮತ್ತಷ್ಟು ಹೆಚ್ಚಾಗಲಿದೆ ಕಂಪನಿಯ ವಕ್ತಾರರು ತಿಳಿಸಿದ್ದಾರೆ.
ಕಂಪನಿಯು ಕಳೆದ ವರ್ಷ ಆಗಸ್ಟ್‌ನಲ್ಲಿ ತನ್ನ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಿಡುಗಡೆ ಮಾಡುವ ಮೂಲಕ ಪರಿಸರ ಸ್ನೇಹಿ ವಾಹನ ಕ್ಷೇತ್ರದಲ್ಲಿ ಕಾಲಿಟ್ಟಿತ್ತು.
ಕಂಪನಿಯು ಕಳೆದ ವರ್ಷ ಜುಲೈನಲ್ಲಿ 499 ರೂ.ಗಳಲ್ಲಿ ಬುಕ್ಕಿಂಗ್ ಸ್ವೀಕರಿಸಿದ ನಂತರ ಸೆಪ್ಟೆಂಬರ್‌ನಲ್ಲಿ ತನ್ನ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗಾಗಿ ಆನ್‌ಲೈನ್ ಆರ್ಡರ್‌ಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿತು.