ಓಲಾ ಎಲೆಕ್ಟ್ರಿಕ್ ವಾಹನದ ಮೇಲೆ ಆಸೆ ಇಟ್ಟುಕೊಂಡವರಿಗೆ ವಾಹನ ಡೆಲಿವರಿ ಪಡೆದುಕೊಳ್ಳುವುದೇ ದೊಡ್ಡ ಸವಾಲಾಗಿತ್ತು. ಆದರೀಗ ಓಲಾ ಎಲೆಕ್ಟ್ರಿಕ್ ಗುಡ್ ನ್ಯೂಸ್ ನೀಡಿದೆ. ಭಾರತದಲ್ಲಿ 14 ದಿನಗಳ ಗ್ಯಾರಂಟಿ ಡೆಲಿವರಿ ಅಭಿಯಾನವನ್ನು ಕಂಪನಿ ಪ್ರಾರಂಭಿಸುತ್ತಿದೆ.
ವಾಹನ ವಿತರಣಾ ಪ್ರಕ್ರಿಯೆ ಮೇಲೆ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಸಮಸ್ಯೆ ಪರಿಹಾರಕ್ಕೆ ಅಭಿಯಾನ ನಡೆಸಲಾಗುತ್ತಿದೆ. ಅದರ ಮಾಹಿತಿಯನ್ನು ಕಂಪನಿ ಶೀಘ್ರವೇ ಪ್ರಕಟಿಸಲಿದೆ. ಮುಖ್ಯವಾಗಿ ಬುಕ್ ಮಾಡಿದ ಹದಿನಾಲ್ಕು ದಿನದೊಳಗೆ ವಾಹನ ತಲುಪಿಸುವ ಉದ್ದೇಶ ಹೊಂದಲಾಗಿದೆ.
ಇತ್ತೀಚೆಗೆ ಓಲಾ ಇವಿ ವಾಹನ ಮಾಲಿಕರಿಗೆ ಕಂಪನಿ ಒಂದು ಚಾಲೆಂಜ್ ನೀಡಿತ್ತು. ಒಂದು ಬಾರಿ ಚಾರ್ಜ್‌ನಲ್ಲಿ 200 ಕಿಮೀ ತಲುಪಬೇಕೆಂಬ ಸವಾಲನ್ನು ಘೋಷಿಸಲಾಗಿತ್ತು. ಅನೇಕರು ಈ ಗುರಿಮುಟ್ಟಿ ಕಂಪನಿಯ ಉಡುಗೊರೆಗೆ ಕಾದಿದ್ದಾರೆ. ಈ ಪ್ರಚಾರ ಅಭಿಯಾನ ಸಾಕಷ್ಟು ಮೈಲೇಜ್ ಪಡೆದುಕೊಂಡಿತು.
ಕುಡಿದ ಅಮಲಿನಲ್ಲಿದ್ದವನಿಂದಾಗಿ ವಿದ್ಯುತ್ ಕಂಬ ಏರಿನಿಂತ ಫೋರ್ಡ್ ಮಾಸ್ಟಾಂಗ್…!
ಓಲಾ ಬಾಳಿಕೆಗೆ ಸಂಬಂಧಿಸಿದಂತೆ ಕೆಲವು ನಕಾರಾತ್ಮಕ ವರದಿಗಳು ಬರುತ್ತಿವೆ. ಗಟ್ಟುಮುಟ್ಟಾಗಿಲ್ಲ ಎಂಬ ಟೀಕೆಗಳು ಬಂದಿವೆ. ಈ ನಡುವೆಯೂ ಓಲಾ ಬೇಡಿಕೆ ತಗ್ಗಿಲ್ಲ. ಕಳೆದ ತಿಂಗಳು ಹನ್ನೆರೆಡು ಸಾವಿರ ಯೂನಿಟ್ ಮಾರಾಟವಾಗಿದೆ.