ಪೆಟ್ರೋಲ್ ದರ ಏರಿಕೆಯ ಕಾಲದಲ್ಲಿ ಎಲೆಕ್ಟ್ರಿಕ್ ವೆಹಿಕಲ್‌ಗಳದ್ದೇ ಮೇನಿಯಾ ಎಂಬಂತಾಗಿದೆ. ಇವಿ ದ್ವಿಚಕ್ರ ವಾಹನ ಉತ್ಪಾದಕರ ನಡುವೆಯೂ ಪೈಪೋಟಿ ಆರಂಭವಾಗಿದ್ದು, ತನ್ನ ಉತ್ಪನ್ನ ಮಾರುಕಟ್ಟೆಗೆ ಬಿಡುಗಡೆ ಮಾಡಿದ ಐದು ತಿಂಗಳಲ್ಲೇ ಓಲಾ ಅತೀ ಹೆಚ್ಚು ಮಾರಾಟ ಮಾಡಿದ (ತಿಂಗಳೊಂದರಲ್ಲಿ) ಕೀರ್ತಿಗೆ ಭಾಜನವಾಗಿದೆ. ಈ ಮೂಲಕ ಈವರೆಗೆ ಅಗ್ರಸ್ಥಾನಿಯಾಗಿದ್ದ ಹೀರೋ ಮೋಟರ್ಸ್ ಅನ್ನು ಹಿಂದಿಕ್ಕಿದೆ.
ಫೆಡರೇಷನ್ ಆಫ್ ಆಟೋ ಮೊಬೈಲ್ ಡೀಲರ್ಸ್ ಅಸೋಸಿಯೇಷನ್ ಹಂಚಿಕೊಂಡ ಮಾಹಿತಿ ಪ್ರಕಾರ ಓಲಾ ಮಾರಾಟ ಗಣನೀಯವಾಗಿ ಹೆಚ್ಚಳವಾಗಿದೆ.
ಇಲ್ಲಿದೆ 2021ರಲ್ಲಿ ಬಿಡುಗಡೆಯಾದ ಟಾಪ್ ಇ – ಸ್ಕೂಟರ್‌ಗಳ ಪಟ್ಟಿ
ಓಲಾ ದ್ವಿಚಕ್ರ ವಾಹನ ವಿಷಯದಲ್ಲಿ ಒಂದಷ್ಟು ಚರ್ಚೆಯೂ ಇದೆ. ಇತ್ತೀಚಿಗೆ ಇ-ಸ್ಕೂಟರ್‌ಗೆ ಬೆಂಕಿ ಹೊತ್ತಿಕೊಂಡ ಘಟನೆಗಳು, ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ಸಮಸ್ಯೆ ಒಳಗೊಂಡಂತೆ ಉತ್ಪಾದನಾ ದೋಷದ ಕುರಿತು ವಾಹನ ಮಾಲಿಕರು ದೂರು ನೀಡಿದ್ದಾರೆ.
ಥಟ್ಟನೆ ಹಿಮ್ಮುಖವಾಗಿ ಚಲಿಸುವುದು ಸೇರಿ ಯಾಂತ್ರಿಕ ಸಮಸ್ಯೆಗಳಿದ್ದರೂ ಓಲಾ ಎಲೆಕ್ಟ್ರಿಕ್ ದೇಶದ ಅತಿ ಹೆಚ್ಚು ಎಲೆಕ್ಟ್ರಿಕ್ ಸ್ಕೂಟರ್ ತಯಾರಕನೆನಿಸಿಕೊಂಡು ಮೂಲಕ ಅಲೆಯನ್ನು ತನ್ನ ಪರ ತಿರುಗಿಸುವಲ್ಲಿ ಯಶಸ್ವಿಯಾಗಿದೆ.
ಓಲಾ ಎಲೆಕ್ಟ್ರಿಕ್ ಏಪ್ರಿಲ್‌ನಲ್ಲಿ 2022 ರಲ್ಲಿ 12,683 ಯೂನಿಟ್, ಮಾರ್ಚ್‌ನಲ್ಲಿ 9,127 ಯೂನಿಟ್ ಮಾರಾಟ ಮಾಡುವಲ್ಲಿ ಯಶಸ್ವಿಯಾಗಿದೆ. ಇತ್ತೀಚೆಗೆ ವಿತರಣೆ ಆರಂಭವಾಗಿರುವ ಓಲಾ ಎಸ್ ಒನ್ ಪ್ರೋ ಅಂಕಿ ಅಂಶ ಇದರಲ್ಲಿ ಸೇರಿಲ್ಲ.
ಮತ್ತೊಂದೆಡೆ, ಹೀರೋ ಎಲೆಕ್ಟ್ರಿಕ್ ಏಪ್ರಿಲ್ 2022 ರಲ್ಲಿ 6,570 ಯುನಿಟ್‌ಗಳನ್ನು ಮಾರಾಟ ಮಾಡಿತು, ಮಾರ್ಚ್‌ನಲ್ಲಿ 13,023 ಯುನಿಟ್‌ಗಳನ್ನು ಮಾರಾಟ ಮಾಡಿತ್ತು.