ಓಲಾ ಎಲೆಕ್ಟ್ರಿಕ್ ಹಬ್ಬದ ಸೀಸನ್ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸ್ಕೂಟರ್ ಮಾರಾಟ ಮಾಡುವ ಗುರಿ ಹಾಕಿಕೊಂಡು ಕಾರ್ಯನಿರ್ವಹಿಸುತ್ತಿದೆ.
ಈ ಪ್ರಯತ್ನಗಳಲ್ಲಿ ಓಲಾ ಎಸ್ 1 ಪ್ರೋನ ಹೊಸ ವಿಶೇಷ ಆವೃತ್ತಿಯ ಬಿಡುಗಡೆ ಸಹ ಸೇರಿವೆ. ಈಗ ಕಂಪನಿಯು ತನ್ನ ಓಲಾ ಎಸ್ 1ನಲ್ಲಿ 10,000 ರೂಪಾಯಿಗಳ ರಿಯಾಯಿತಿ ಕೊಡುಗೆಯನ್ನು ದೀಪಾವಳಿಯವರೆಗೆ ವಿಸ್ತರಿಸಿದೆ.
ನವರಾತ್ರಿಯ ಸಮಯದಲ್ಲಿ ಈ ಕೊಡುಗೆಯನ್ನು ಪ್ರಾರಂಭಿಸಿದ್ದು, ಗ್ರಾಹಕರಿಂದ ಪಡೆದ ಪ್ರತಿಕ್ರಿಯೆ ಮತ್ತು ವಿನಂತಿಗಳಿಂದ ಕೊಡುಗೆಯನ್ನು ಕಂಪನಿ ವಿಸ್ತರಿಸಿದೆ.
ಓಲಾ ಎಲೆಕ್ಟ್ರಿಕ್ ಸಿಇಒ ಭವಿಶ್ ಅಗರ್ವಾಲ್ ತಮ್ಮ ಅಧಿಕೃತ ಟ್ವಿಟರ್ ಹ್ಯಾಂಡಲ್ ಮೂಲಕ ಈ ಸುದ್ದಿ ಹಂಚಿಕೊಂಡಿದ್ದಾರೆ. “ನಮ್ಮ ಎಸ್ ಒನ್ ಉತ್ಪನ್ನಗಳಿಗೆ ಈ ನವರಾತ್ರಿಯ ಪ್ರತಿಕ್ರಿಯೆಯಿಂದ ನಿಜವಾಗಿಯೂ ವಿನೀತರಾಗಿದ್ದೇವೆ! ಹಲವರು ಕೇಳಿಕೊಂಡಿದ್ದರಿಂದ, ದೀಪಾವಳಿಯವರೆಗೆ ಹಬ್ಬದ ಕೊಡುಗೆಗಳನ್ನು ವಿಸ್ತರಿಸುತ್ತೇವೆ.” ಎಂದು ಘೋಷಣೆ ಪ್ರಕಟಿಸಿದ್ದಾರೆ.
ಓಲಾ ಎಸ್ ಒನ್ ಎಲೆಕ್ಟ್ರಿಕ್ ಸ್ಕೂಟರ್, ಎಸ್ ಒನ್ ಪ್ರೋ ಫ್ಲ್ಯಾಗ್ಶಿಪ್ ಮಾದರಿ ಆವೃತ್ತಿಯನ್ನು ಈ ವರ್ಷದ ಆಗಸ್ಟ್ 15 ರಂದು ಪರಿಚಯಿಸಲಾಗಿತ್ತು.
ಎಸ್ ಒನ್ ಎಲೆಕ್ಟ್ರಿಕ್ ಸ್ಕೂಟರ್ನ ಖರೀದಿ ವಿಂಡೋವನ್ನು ಸೆಪ್ಟೆಂಬರ್ 1 ರಂದು ತೆರೆಯಲಾಗಿದ್ದು ಸೆಪ್ಟೆಂಬರ್ 7 ರಂದು ವಿತರಣೆಯನ್ನು ಪ್ರಾರಂಭಿಸಲಾಯಿತು.