alex Certify ವೆಚ್ಚ ಕಡಿತಗೊಳಿಸಲು ಮುಂದಾದ ಓಲಾ; 500 ಉದ್ಯೋಗಿಗಳ ವಜಾಗೊಳಿಸುವ ಪ್ರಕ್ರಿಯೆಗೆ ಚಾಲನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವೆಚ್ಚ ಕಡಿತಗೊಳಿಸಲು ಮುಂದಾದ ಓಲಾ; 500 ಉದ್ಯೋಗಿಗಳ ವಜಾಗೊಳಿಸುವ ಪ್ರಕ್ರಿಯೆಗೆ ಚಾಲನೆ

ಪ್ರಯಾಣ ಸೇವಾ ಪ್ಲಾಟ್​ಫಾರ್ಮ್ ಓಲಾ ತನ್ನ ಸರಿ ಸುಮಾರು 1,100 ಉದ್ಯೋಗಿಳ ಪೈಕಿ 500 ಉದ್ಯೋಗಿಗಳನ್ನು ವಜಾಗೊಳಿಸುವ ಪ್ರಕ್ರಿಯೆ ಪ್ರಾರಂಭಿಸಿದೆ.

ಪ್ರಸ್ತುತ ಆರ್ಥಿಕ ಪರಿಸ್ಥಿತಿಯಲ್ಲಿ ವೆಚ್ಚ ಕಡಿತಗೊಳಿಸುವ ಗುರಿಯನ್ನು ಹೊಂದಿದ್ದು, ಈ ಪ್ರಯತ್ನದ ಭಾಗವಾಗಿ ಸಿಬ್ಬಂದಿಯನ್ನು ಕಡಿತ ಮಾಡಲು ಬಯಸಿದೆ. ನಾವು ನಮ್ಮ ಕೆಲವು ವ್ಯವಹಾರಗಳ ಪುನರ್​ ರಚನೆಯಲ್ಲಿ ಕೆಲಸ ಮಾಡುತ್ತಿದ್ದೇವೆ. ಅದನ್ನು ನಿರಂತರ ಪ್ರಕ್ರಿಯೆಯಾಗಿ ನಡೆಯುತ್ತದೆ ಎಂಬ ಹಿರಿಯ ಅಧಿಕಾರಿಯ ಮಾತುಗಳು ಗಮನ ಸೆಳೆದಿದೆ.

ಓಲಾದ ಟ್ಯಾಲೆಂಟ್​ ಅಕ್ವಿಸಿಷನ್​ನ ಮುಖ್ಯಸ್ಥ ಶಿಖರ್​ ಸೂದ್​ ಅವರಿಂದಲೇ ವಜಾ ಪ್ರಕ್ರಿಯೆ ಆರಂಭವಾಗಿದೆ. ಹಲವು ಉನ್ನತ ಅಧಿಕಾರಿಗಳು ರಾಜೀನಾಮೆ ನೀಡಿ ಹೊರಬಂದಿದ್ದಾರೆ.

ಮಾಧ್ಯಮಗಳ ವರದಿ ಪ್ರಕಾರ, ಹಲವಾರು ಮಾಜಿ ಕಾರ್ಯನಿರ್ವಾಹಕರು, ಪ್ರಾಡಕ್ಟ್​ ಕಂಪ್ಲೇಂಟ್​, ಘಟಕ ಮುಚ್ಚುವಿಕೆ ಮತ್ತು “ಆಕ್ಟ್​ ಫಸ್ಟ್​, ಥಿಂಕ್​ ನೆಕ್ಟ್ಸ್​’ ಸಂಸ್ಕೃತಿಯು ಇತ್ತೀಚಿನ ಓಲಾ ತೊಂದರೆಗಳಿಗೆ ಕಾರಣವಾಗಿದೆ ಎಂದು ಹೇಳಿದ್ದಾರೆ. ವಾರದ ಆರಂಭದಲ್ಲಿ, ಕಂಪನಿಯ ಚಾರ್ಜಿಂಗ್ ನೆಟ್​ವರ್ಕ್ ವಿಭಾಗದ ಹಿರಿಯ ನಿರ್ದೇಶಕ ಮತ್ತು ವ್ಯವಹಾರ ಮುಖ್ಯಸ್ಥ ಯಶವಂತ್​ ಕುಮಾರ್​ ಸಹ ತಮ್ಮ ನಿರ್ಧಾರ ಪ್ರಕಟಿಸಿದರು.

ಕಳೆದ ತಿಂಗಳು, ಓಲಾ ತನ್ನ ಬಳಸಿದ ವಾಹನ ವ್ಯಾಪಾರ ಓಲಾ ಕಾರ್ಸ್​ ಮತ್ತು ಓಲಾ ಡ್ಯಾಶ್​, ಅದರ ತ್ವರಿತ- ವಾಣಿಜ್ಯ ವ್ಯಾಪಾರವನ್ನು ಸ್ಥಗಿತಗೊಳಿಸಿತು. ಕಂಪನಿಯು ತನ್ನ ಎಲೆಕ್ಟ್ರಿಕ್​ ದ್ವಿಚಕ್ರ ವಾಹನ ಮತ್ತು ಎಲೆಕ್ಟ್ರಿಕ್​ ಕಾರ್​ ಮೇಲೆ ಕೇಂದ್ರೀಕರಿಸಿದ ಕಾರಣ, ಆರಂಭವಾದ ಒಂದು ವರ್ಷದೊಳಗೆ ಓಲಾ ಕಾರ್ಸ್‌ಗಳ ಕಾರ್ಯಾಚರಣೆಯನ್ನು ನಿಲ್ಲಿಸಿದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...