ಜಪಾನ್‌ನ ಟೋಕಿಯೊದಲ್ಲಿ ಜುಲೈ 23 ರಿಂದ ಆಗಸ್ಟ್ 8 ರವರೆಗೆ ನಡೆಯಲಿರುವ ಒಲಿಂಪಿಕ್ ಕ್ರೀಡಾಕೂಟಕ್ಕೆ ಸಿದ್ಧತೆಗಳು ನಡೆಯುತ್ತಿವೆ. ಕ್ರೀಡಾಪಟುಗಳಿಗೆ ಕಾಂಡೋಮ್ ವಿತರಿಸಲು ಸಂಘಟನಾ ಸಮಿತಿ ಕಾಂಡೋಮ್ ಗಳನ್ನು ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸಿದೆ. ಆದರೆ ಇದರ ಬಳಕೆಯನ್ನು ನಿಷೇಧಿಸಿದೆ. ಕಾಂಡೋಮ್‌ಗಳನ್ನು ಕ್ರೀಡಾ ಗ್ರಾಮದಲ್ಲಿ ಬಳಸಲು ಸಾಧ್ಯವಿಲ್ಲ. ಅದನ್ನು ಕ್ರೀಡಾಪಟುಗಳು ತೆಗೆದುಕೊಂಡು ಹೋಗಬಹುದೆಂದು ಸಂಘಟಕರು ಹೇಳಿದ್ದಾರೆ.
ಏಡ್ಸ್ ಬಗ್ಗೆ ಜಾಗೃತಿ ಮೂಡಿಸಲು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಕಾಂಡೋಮ್ ವಿತರಿಸುವ ಸಂಪ್ರದಾಯವನ್ನು ಪ್ರಾರಂಭಿಸಿದೆ. ಈ ಬಾರಿ ಸಂಪ್ರದಾಯದ ಪ್ರಕಾರ, ಕ್ರೀಡಾಕೂಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಕ್ರೀಡಾ ಗ್ರಾಮದಲ್ಲಿ ತಂಗಿದ್ದಾಗ ಉಚಿತ ಕಾಂಡೋಮ್ ನೀಡಲಾಗುವುದು. ಇದಕ್ಕಾಗಿ ಸಮಿತಿ 1.6 ಲಕ್ಷಕ್ಕೂ ಹೆಚ್ಚು ಕಾಂಡೋಮ್‌ಗಳನ್ನು ವಿತರಿಸಲಿದೆ. ಪ್ರತಿ ಕ್ರೀಡಾಪಟುವಿಗೆ ಸುಮಾರು 14 ಕಾಂಡೋಮ್ ಸಿಗಲಿದೆ. ಆದರೆ ಅವುಗಳ ಬಳಕೆಯನ್ನು ನಿಷೇಧಿಸಲಾಗಿದೆ.
ಕೊರೊನಾ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕ್ರೀಡಾಪಟುಗಳು ಪರಸ್ಪರ ಸ್ಪರ್ಶಿಸುವುದನ್ನು ತಡೆಯಲು ಈ ಕ್ರಮಕೈಗೊಳ್ಳಲಾಗಿದೆ. ದೈಹಿಕ ಸಂಪರ್ಕ ತಡೆಯುವಂತೆ ಕ್ರೀಡಾಪಟುಗಳಿಗೆ ಅನೇಕ ಸೂಚನೆಗಳನ್ನು ನೀಡಲಾಗಿದೆ.