ಪಲ್ಲೆ, ಸೂಪ್, ಸಲಾಡ್ ಹೀಗೆ ನಾನಾ ಬಗೆಯ ಆಹಾರದ ರೂಪದಲ್ಲಿ ಬೆಂಡೆಕಾಯಿ ನಿಮ್ಮ ಹೊಟ್ಟೆ ಸೇರುತ್ತೆ. ಜಿಡ್ಡಿನ ಅಂಶವಿರುವ ಬೆಂಡೆಕಾಯಿ ಬಾಯಿಗಷ್ಟೇ ರುಚಿಯಲ್ಲ, ಆರೋಗ್ಯಕ್ಕೂ ತುಂಬಾ ಒಳ್ಳೆಯದು.
ದೊಡ್ಡ ಕರುಳಿನ ಕ್ಯಾನ್ಸರ್ ದೂರ ಮಾಡಲು ಬೆಂಡೆಕಾಯಿ ಬಹಳ ಒಳ್ಳೆಯದು. ಕರುಳಿನಲ್ಲಿರುವ ಟಾಕ್ಸಿಕ್ ಅಂಶವನ್ನು ಹೊಡೆದೋಡಿಸಿ ಕರುಳಿನ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.
ಮಲಬದ್ಧತೆಯನ್ನು ದೂರ ಮಾಡಲು ಬೆಂಡೆಕಾಯಿ ಉತ್ತಮ ಔಷಧ. ಫೈಬರ್ ಅಂಶ ಇದರಲ್ಲಿ ಹೇರಳವಾಗಿದ್ದು, ಜೀರ್ಣಕ್ರಿಯೆಯನ್ನು ಸುಲಭ ಮಾಡುತ್ತದೆ.
ರಕ್ತಹೀನತೆಯಿಂದ ದೇಹವನ್ನು ರಕ್ಷಿಸುತ್ತದೆ. ಬೆಂಡೆಕಾಯಿಯಲ್ಲಿರುವ ಕಬ್ಬಿಣದ ಅಂಶ ನಮ್ಮ ದೇಹಕ್ಕೆ ಬಹಳ ಪ್ರಯೋಜನಕಾರಿ. ಇದು ಹಿಮೋಗ್ಲೋಬಿನ್ ಅಂಶವನ್ನು ಹೆಚ್ಚಿಸಿ ರಕ್ತಹೀನತೆಯನ್ನು ತಡೆಗಟ್ಟುತ್ತದೆ.
ತೂಕ ಇಳಿಸಿಕೊಳ್ಳುವವರು ನಿಶ್ಚಿಂತೆಯಿಂದ ಬೆಂಡೆಕಾಯಿ ಸೇವನೆ ಮಾಡಬಹುದು. ಇದರಲ್ಲಿ ಕ್ಯಾಲೋರಿ ಇರುವುದಿಲ್ಲ. ಹಾಗೆ ಫೈಬರ್ ಜಾಸ್ತಿ ಇರುವುದರಿಂದ ತೂಕ ಇಳಿಸಿಕೊಳ್ಳಲು ನೆರವಾಗುತ್ತದೆ.
ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವವರಿಗೆ ಬೆಂಡೆಕಾಯಿ ಹೇಳಿ ಮಾಡಿಸಿದ ತರಕಾರಿ. ಫೈಬರ್ ಅಂಶ ಜಾಸ್ತಿ ಇರುವುದರಿಂದ ರಕ್ತದಲ್ಲಿರುವ ಕೊಲೆಸ್ಟ್ರಾಲ್ ಅಂಶವನ್ನು ಅದು ಕಡಿಮೆ ಮಾಡುತ್ತದೆ. ಹಾಗಾಗಿ ಹೃದಯಾಘಾತವಾಗುವ ಸಂಭವ ಕಡಿಮೆ ಇರುತ್ತದೆ.
ದಟ್ಟ ಹಾಗೂ ಕಪ್ಪನೆಯ ಕೂದಲನ್ನು ಬಯಸುವವರು ಬೆಂಡೆಕಾಯಿ ಸೇವನೆ ಮಾಡಬೇಕು. ಹಾಗೆ ಬೆಂಡೆಕಾಯಿಯನ್ನು ಸಣ್ಣದಾಗಿ ಕತ್ತರಿಸಿ ಅದಕ್ಕೆ ನಿಂಬೆ ರಸವನ್ನು ಸೇರಿಸಿ, ಆ ರಸದಲ್ಲಿ ತಲೆ ತೊಳೆದ್ರೆ ಕೂದಲುದುರುವುದು ಕಡಿಮೆಯಾಗುತ್ತದೆ.