ಆಯಿಲ್ ಇಂಡಿಯಾ ಲಿಮಿಟೆಡ್ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಅಸಿಸ್ಟಂಟ್ ಟೆಕ್ನಿಷಿಯನ್ ಹಾಗೂ ಜ್ಯೂನಿಯರ್ ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದೆ. ಆಸಕ್ತ ಅಭ್ಯರ್ಥಿಗಳು oil-india.com. ನಲ್ಲಿ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.
ಅಂದಹಾಗೆ ಈ ಹುದ್ದೆಯು ದೇಶದ ಎಲ್ಲಾ ರಾಜ್ಯದ ಜನತೆಗೆ ಲಭ್ಯವಿಲ್ಲ. ಆಸ್ಸಾಂನ ಜೋರ್ಹಟ್, ಗೋಲಾಘಾಟ್, ಮೋರಿಗಾಂವ್, ಕಲಿಯಾಬೋರ್, ಮ್ರೂಪ್, ಮೆಟ್ರೋಪಾಲಿಟನ್, ಕಮ್ರೂಪ್, ನಲ್ಬಾರಿ, ಬಜಾಲಿ, ಬರ್ಪೇಟಾ, ಬೊಂಗೈಗಾಂವ್ ಹಾಗೂ ಕೊಕ್ರಾಜಾರ್ ಜಿಲ್ಲೆಯ ಅಭ್ಯರ್ಥಿಗಳು ಮಾತ್ರ ಹುದ್ದೆಗೆ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.
ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು ಅರ್ಜಿ ಸಲ್ಲಿಸಲು ನಾಳೆಯೇ ಕೊನೆಯ ದಿನಾಂಕವಾಗಿದೆ.
ಹುದ್ದೆಗಳ ವಿವರ
ಅಸಿಸ್ಟಂಟ್ ಟೆಕ್ನಿಷಿಯನ್ ( ಎಲೆಕ್ಟ್ರಿಕಲ್ & ಕ್ಯಾಥೋಡಿಕ್) – 18
ಅಸಿಸ್ಟಂಟ್ ಟೆಕ್ನಿಷಿಯನ್ ( ಟೆಲಿಕಮ್ಯೂನಿಕೇಷನ್) – 02
ಅಸಿಸ್ಟಂಟ್ ಟೆಕ್ನಿಷಿಯನ್ (ಫಿಟ್ಟಿಂಗ್) – 04
ಜ್ಯೂನಿಯರ್ ಇಂಜಿನಿಯರ್ ( ಎಲೆಕ್ಟ್ರಿಕಲ್ & ಕ್ಯಾಥೋಡಿಕ್) – 12
ಜ್ಯೂನಿಯರ್ ಇಂಜಿನಿಯರ್ ( ಟೆಲಿಕಮ್ಯೂನಿಕೇಷನ್) – 04
ಜ್ಯೂನಿಯರ್ ಇಂಜಿನಿಯರ್ (ಸಿವಿಲ್) – 02
ಜ್ಯೂನಿಯರ್ ಇಂಜಿನಿಯರ್ ( ಆಪರೇಷನ್) – 10
ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಕನಿಷ್ಟ 18 ವರ್ಷ ಹಾಗೂ ಗರಿಷ್ಟ 30 ವರ್ಷ ವಯಸ್ಸಿನವರಾಗಿರಬೇಕು. ನಿವೃತ್ತ ಯೋಧ, ದಿವ್ಯಾಂಗರಿಗೆ ಈ ವಯಸ್ಸಿನ ಮಿತಿಯಲ್ಲಿ ವಿನಾಯ್ತಿ ನೀಡಲಾಗಿದೆ.