
ಬೆಂಗಳೂರು: ಕಂದಾಯ ಇಲಾಖೆಯ ಸ್ಥಳ ನಿರೀಕ್ಷಣೆಯಲ್ಲಿರುವ ಹಾಗೂ ಸ್ಥಳ ನಿರೀಕ್ಷಣೆಗೆ ಬರಲಿರುವ ತಹಶೀಲ್ದಾರ್ ವೃಂದದ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.
ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣ ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೆ ಸ್ಥಳ ನಿಯತ್ತಿಗೊಳಿಸಿ ಆದೇಶ ನೀಡಲಾಗಿದೆ. ಸ್ಥಳ ನಿಯುಕ್ತಿಗೊಳಿಸಿದ ಅಧಿಕಾರಿಗಳು ತಮಗೆ ನಿಯುಕ್ತಿಗೊಳಿಸಿದ ಹುದ್ದೆಗಳಲ್ಲಿ ಕಾರ್ಯಭಾರ ವಹಿಸಿಕೊಂಡು ಸಿಟಿಸಿ ಪ್ರತಿಯನ್ನು ಇಮೇಲ್ ಮೂಲಕ ಕಳುಹಿಸುವಂತೆ ಕಂದಾಯ ಇಲಾಖೆ ಅಧೀನ ಕಾರ್ಯದರ್ಶಿ ತಿಳಿಸಿದ್ದಾರೆ.


