ಕೀವ್: ಉಕ್ರೇನ್ ಮೇಲೆ ರಷ್ಯಾ ಸೇನೆ ಐದನೇ ದಿನವಾದ ಇಂದು ಕೂಡ ದಾಳಿ ಮುಂದುವರೆಸಿದೆ. ಈ ನಡುವೆ ಉಕ್ರೇನ್ ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣಾ ಕಾರ್ಯಾಚರಣೆಗಾಗಿ ಕೇಂದ್ರ ಸರ್ಕಾರ ಆಪರೇಷನ್ ಗಂಗಾ ಏರ್ ಲಿಫ್ಟ್ ಚುರುಕುಗೊಳಿಸಿದೆ. ಉಕ್ರೇನ್ ನಲ್ಲಿರುವ ಭಾರತೀಯರಿಗಾಗಿ ಮತ್ತೊಂದು ಟ್ವಿಟರ್ ಖಾತೆ ತೆರೆದಿದೆ.
ಈಗಾಗಲೇ ಆಪರೇಷನ್ ಗಂಗಾ ಕಾರ್ಯಾಚರಣೆ ಮೂಲಕ 5 ವಿಮಾನಗಳು ಉಕ್ರೇನ್ ನಿಂದ ಭಾರತೀಯರನ್ನು ಹೊತ್ತು ಆಗಮಿಸಿದ್ದು, ಉಳಿದ ಭಾರತೀಯರ ಸ್ಥಳಾಂತರಕ್ಕಾಗಿ ಹೊಸ ಟ್ವಿಟರ್ ಅಕೌಂಟ್ ಓಪನ್ ಮಾಡಿದೆ. ಉಕ್ರೇನ್ ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆ, ಸ್ಥಳಾಂತರ ನಿಟ್ಟಿನಲ್ಲಿ ಸುಲಭ ಸಂವಹನಕ್ಕಾಗಿ twitter.com/opganga ಹೆಸರಲ್ಲಿ ಖಾತೆ ತೆರೆಯಲಾಗಿದೆ.
ಉಕ್ರೇನ್ ವಿಚಾರವಾಗಿ ಪ್ರಧಾನಿ ಮೋದಿ ಉನ್ನತ ಮಟ್ಟದ ಸಭೆ: ಆಯ್ದ ಕೇಂದ್ರ ಸಚಿವರು ವಿದೇಶ ಪ್ರಯಾಣ ಸಾಧ್ಯತೆ
ರಕ್ಷಣಾ ಕಾರ್ಯಾಚರಣೆ ಕುರಿತು ವಿದ್ಯಾರ್ಥಿಗಳು ಪ್ರತಿಯೊಂದು ಅಪ್ಡೇಟ್ ನ್ನು ಈ ಟ್ವಿಟರ್ ನಲ್ಲಿ ನೋಡಬಹುದು. ಹಾಗೂ ಮಾಹಿತಿ ನೀಡಬಹುದಾಗಿದೆ.