ಕಾರವಾರ: ಉತ್ತರ ಕನ್ನಡ ಜಿಲ್ಲೆ ಶಿರಸಿಯ ತಹಶೀಲ್ದಾರ್ ಕಚೇರಿಯ ಕಂದಾಯ ಅಧಿಕಾರಿ ಕಾರ್ ನಲ್ಲಿಯೇ ಮೃತಪಟ್ಟಿದ್ದಾರೆ.
ವಿನಾಯಕ ಭಟ್ ಮೃತಪಟ್ಟವರು ಎಂದು ಹೇಳಲಾಗಿದೆ. ಶಿರಸಿ ಮಿನಿ ವಿಧಾನಸೌಧ ಎದುರು ನಿಲ್ಲಿಸಿದ್ದ ತಮ್ಮ ಕಾರ್ ನಲ್ಲಿಯೇ ಅವರು ಮೃತಪಟ್ಟಿದ್ದು, ಸಾವಿಗೆ ಕಾರಣ ತಿಳಿದು ಬಂದಿಲ್ಲ. ಹೃದಯಘಾತದಿಂದ ವಿನಾಯಕ ಭಟ್ ಸಾವನ್ನಪ್ಪಿರಬಹುದು ಎಂದು ಹೇಳಲಾಗಿದೆ.
ಮಧ್ಯಾಹ್ನ ಕಾರ್ ನಲ್ಲಿ ಕಚೇರಿಗೆ ಬಂದಿದ್ದ ವಿನಾಯಕ ಭಟ್ ಸಂಜೆ 5 ಗಂಟೆಯಾದರೂ ಕಚೇರಿಯ ಒಳಗೆ ಬಂದಿರಲಿಲ್ಲ. ಇದನ್ನು ಕಂಡ ಸಿಬ್ಬಂದಿಯೊಬ್ಬರು ಕಾರ್ ಬಳಿ ಹೋಗಿ ನೋಡಿದಾಗ ವಿನಾಯಕ ಭಟ್ ಮೃತಪಟ್ಟಿರುವುದು ಗೊತ್ತಾಗಿದೆ. ಯಲ್ಲಾಪುರ ತಾಲೂಕಿನವರಾದ ವಿನಾಯಕ ಭಟ್ ಶಿರಸಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.