
ಬೆಂಗಳೂರು: ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಫೋಟೋ ದುರ್ಬಳಕೆ ಹಿನ್ನೆಲೆಯಲ್ಲಿ ದೂರು ನೀಡಲಾಗಿದೆ.
ರಾಕೇಶ್ ಸಿಂಗ್ ಅವರ ಹೆಸರಿನಲ್ಲಿ ಅಸಂಬದ್ಧ ಸಂದೇಶ ರವಾನಿಸಲಾಗಿದೆ. ಬಿಬಿಎಂಪಿ ವಿಶೇಷ ಆಯುಕ್ತ ಹರೀಶ್ ಅವರಿಗೆ ಅಸಂಬದ್ಧ ಸಂದೇಶ ರವಾನಿಸಲಾಗಿದ್ದು, ಈ ಕುರಿತು ರಾಕೇಶ್ ಸಿಂಗ್ ಅವರಿಗೆ ಹರೀಶ್ ಮಾಹಿತಿ ನೀಡಿದ್ದರು. ಫೋಟೋ ದುರ್ಬಳಕೆ ಮಾಡಿಕೊಂಡು ಅಸಂಬದ್ಧ ಸಂದೇಶ ರವಾನೆ ಹಿನ್ನಲೆಯಲ್ಲಿ ರಾಕೇಶ್ ಸಿಂಗ್ ಅವರು ಕೇಂದ್ರ ವಿಭಾಗದ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆನ್ನಲಾಗಿದೆ.