ಬೆಂಗಳೂರು: ಕಚೇರಿಗೆ ಲೇಟಾಗಿ ಬರುವ, ಸಮಯ ಪಾಲನೆ ಮಾಡದ ಅಧಿಕಾರಿಗಳು, ನೌಕರರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸುವುದಾಗಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ಎಚ್ಚರಿಕೆ ನೀಡಿದ್ದಾರೆ.
ಕಂದಾಯ ಇಲಾಖೆ ಕಚೇರಿಗಳಲ್ಲಿ 10.45, 11 ಗಂಟೆಯಾದರೂ ಅನೇಕ ಅಧಿಕಾರಿಗಳು, ನೌಕರರು ಕಚೇರಿಗೆ ಆಗಮಿಸುತ್ತಿರುವುದು ಕಂಡುಬಂದಿದೆ. ತಾವು ಕಚೇರಿ ಪರಿಶೀಲನೆ ನಡೆಸುವಾಗಲೇ ಹಲವು ಕಡೆ 10.45 ಆದರೂ ಅಧಿಕಾರಿಗಳು, ಸಿಬ್ಬಂದಿ ಕಚೇರಿಗೆ ಬಂದಿರುವುದಿಲ್ಲ. ಅಲ್ಲದೇ, ಕಚೇರಿಯ ವೇಳೆಯಲ್ಲಿ ಗಂಟೆಗಟ್ಟಲೆ ಟೀ, ಕಾಫಿ, ತಿಂಡಿಗಾಗಿ ಕಚೇರಿ ಬಿಟ್ಟು ಹೋಗುವುದು ಹೆಚ್ಚಾಗಿದೆ. ಇದರಿಂದ ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ತೊಂದರೆಯಾಗುತ್ತಿದ್ದು, ಕಚೇರಿಗೆ ಲೇಟಾಗಿ ಬರುವ ಮತ್ತು ಸಮಯ ಪಾಲನೆ ಮಾಡದ ಅಧಿಕಾರಿಗಳು, ಸಿಬ್ಬಂದಿ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.