ಬೆಂಗಳೂರು: ರಾಜ್ಯ ಬಿಜೆಪಿಯ ವಿವಿಧ ಹುದ್ದೆಗಳಿಗೆ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಮುಖ್ಯ ವಕ್ತಾರರು, ವಕ್ತಾರರು, ವಿವಿಧ ವಿಭಾಗಗಳ ಸಂಚಾಲಕರು, ಸಹ ಸಂಚಾಲಕರನ್ನು ಪಕ್ಷದ ರಾಜ್ಯಾಧ್ಯಕ್ಷರಾದ ಬಿ.ವೈ. ವಿಜಯೇಂದ್ರ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ವಿಧಾನ ಪರಿಷತ್ ಮಾಜಿ ಸದಸ್ಯ ಅಶ್ವತ್ಥ್ ನಾರಾಯಣ ಅವರನ್ನು ಮುಖ್ಯ ವಕ್ತಾರರಾಗಿ ನೇಮಕ ಮಾಡಲಾಗಿದೆ. ವಕ್ತಾರರಾಗಿ ವಿಸ್ತಾರ ವಾಹಿನಿ ಸಂಪಾದಕ ಹರಿಪ್ರಕಾಶ ಕೋಣೆಮನೆ, ಛಲವಾದಿ ನಾರಾಯಣ ಸ್ವಾಮಿ, ತೇಜಸ್ವಿನಿ ಗೌಡ, ಕೆ.ಎಸ್. ನವೀನ್, ಎಂ.ಜಿ. ಮಹೇಶ್ಮ ಹೆಚ್.ಎನ್. ಚಂದ್ರಶೇಖರ್, ನರೇಂದ್ರ ರಂಗಪ್ಪ, ಸುರಭಿ ಹೊದಿಗೆರೆ, ಅಶೋಕ್ ಕೆ.ಎಂ. ಗೌಡ, ಹೆಚ್. ವೆಂಕಟೇಶ್ ದೊಡ್ಡೇರಿ ಅವರನ್ನು ನೇಮಕ ಮಾಡಲಾಗಿದೆ.
ಸಾಮಾಜಿಕ ಜಾಲತಾಣ ಸಂಚಾಲಕರಾಗಿ ಪ್ರಶಾಂತ ಮಾಕನೂರು, ಸಹ ಸಂಚಾಲಕರಾಗಿ ನರೇಂದ್ರ ಮೂರ್ತಿ, ಮಾಧ್ಯಮ ವಿಭಾಗ ಸಂಚಾಲಕರಾಗಿ ಕರುಣಾಕರ ಕಾಸಲೆ, ಸಹ ಸಂಚಾಲಕರಾಗಿ ಪ್ರಶಾಂತ ಕೆಡಂಜಿ, ಮಾಹಿತಿ ತಂತ್ರಜ್ಞಾನ ವಿಭಾಗ ಸಂಚಾಲಕರಾಗಿ ನಿತಿನ್ ರಾಜ್, ಸಹ ಸಂಚಾಲಕರಾಗಿ ಶ್ಯಾಮಲಾ ರಘುನಂದನ್ ಅವರನ್ನು ನೇಮಕ ಮಾಡಲಾಗಿದೆ.