ಹಿಂದೂ ಧರ್ಮದಲ್ಲಿ ಮಂಗಳವಾರ ಹನುಮಂತನ ಆರಾಧನೆ ನಡೆಯುತ್ತದೆ. ಹನುಮಂತನನ್ನು ಸಂಕಟ ಹರಣ ಎಂದು ಕರೆಯಲಾಗುತ್ತದೆ. ಹನುಮಂತನ ಕೃಪೆಗೆ ಪಾತ್ರರಾದವರು ಎಲ್ಲ ಕ್ಷೇತ್ರದಲ್ಲೂ ಯಶಸ್ಸು ಸಾಧಿಸುತ್ತಾರೆ ಎಂಬ ನಂಬಿಕೆಯಿದೆ.
ಹನುಮಂತನನ್ನು ಒಲಿಸಿಕೊಳ್ಳಲು ಭಜರಂಗಿ ಪೂಜೆಗೆ ವಿಶೇಷ ವಸ್ತುಗಳನ್ನು ಬಳಸಲಾಗುತ್ತದೆ. ಮಂಗಳವಾರ ಹನುಮಂತನ ಪೂಜೆಗೆ ವೀಳ್ಯದೆಲೆಯನ್ನು ಬಳಸಲಾಗುತ್ತದೆ. ಹಿಂದೂ ಧರ್ಮದಲ್ಲಿ ವೀಳ್ಯದೆಲೆಗೆ ವಿಶೇಷ ಮಹತ್ವವಿದೆ. ಶುಭ ಕಾರ್ಯದಿಂದ ಹಿಡಿದು ಪ್ರತಿಯೊಂದು ವಿಶೇಷ ಪೂಜೆಯಲ್ಲೂ ವೀಳ್ಯದೆಲೆಯನ್ನು ಬಳಸಲಾಗುತ್ತದೆ.
ಹನುಮಂತನ ಪೂಜೆಗೂ ವೀಳ್ಯದೆಲೆ ಬಳಸಲಾಗುತ್ತದೆ. ಸಮುದ್ರ ಮಂಥನದ ವೇಳೆಯೂ ವೀಳ್ಯದೆಲೆ ಬಳಸಲಾಗಿತ್ತಂತೆ. ಹಾಗಾಗಿ ವೀಳ್ಯದೆಲೆ ಮಹತ್ವ ಮತ್ತಷ್ಟು ಹೆಚ್ಚಾಯ್ತು ಎನ್ನಲಾಗುತ್ತದೆ. ಮಂಗಳವಾರ ಹನುಮಂತನಿಗೆ ವೀಳ್ಯದೆಲೆ ಅಥವಾ ಎಲೆ ಅಡಿಕೆ ನೀಡುವುದ್ರಿಂದ ಹನುಮಂತ ಪ್ರಸನ್ನನಾಗ್ತಾನೆಂಬ ನಂಬಿಕೆಯಿದೆ.
ಹನುಮಂತನಿಗೆ ವೀಳ್ಯದೆಲೆ ಅರ್ಪಿಸುವ ವೇಳೆ ಕೆಲವೊಂದು ಸಂಗತಿಗಳ ಬಗ್ಗೆ ಗಮನ ನೀಡಬೇಕಾಗುತ್ತದೆ. ಎಲೆ ಜೊತೆ ಗುಲಕನ್, ಸೋಂಪನ್ನು ನೀಡಬೇಕು. ಇದ್ರ ಜೊತೆ ಅಡಿಕೆಯನ್ನು ಮಾತ್ರ ನೀಡಬಾರದು.