
ಮಾಲ್ಡೀವ್ಸ್ ಕಡಲ ತೀರದಲ್ಲಿ ಬಿಕಿನಿ ಧರಿಸಿರುವ ಮಾನುಷಿ ಛಿಲ್ಲರ್ ಫೋಟೋಗೆ ಪೋಸ್ ನೀಡಿದ್ದಾರೆ. ಬೀಚ್ ಉಡುಪಿನಲ್ಲಿ ತನ್ನ ನೀಳ ದೇಹದ ಫೋಟೋ ಕ್ಲಿಕ್ಕಿಸಿದ ಅವರು ಈ ಚಿತ್ರವನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಕೆಂಪು ಬಣ್ಣದ ಬೀಚ್ ಉಡುಪಿನಲ್ಲಿ ಕಂಗೊಳಿಸುತ್ತಿರುವ ಮಾನುಷಿ ಛಿಲ್ಲರ್ ಅವರನ್ನು ನೋಡಿದ ನೆಟ್ಟಿಗರು ಕಣ್ ಕಣ್ ಬಿಟ್ಟಿದ್ದಾರೆ.
ಮಾನುಷಿ ಛಿಲ್ಲರ್ ವಾಸ್ತವವಾಗಿ ಈ ವರ್ಷ ಎರಡನೇ ಬಾರಿಗೆ ಮಾಲ್ಡೀವ್ಸ್ ದ್ವೀಪಕ್ಕೆ ಭೇಟಿ ಕೊಟ್ಟಿದ್ದಾರೆ. ಮಾನುಷಿ ಚಿಲ್ಲರ್ ಈಜುಡುಗೆಯ ತುಣುಕಲ್ಲಿ ಸುಂದರವಾಗಿ ಕಾಣುತ್ತಿದ್ದಾರೆ. ಪಡ್ಡೆಹೈಕಳಂತೂ ಇವರ ಫೋಟೋ ನೋಡಿ ಕ್ಲೀನ್ ಬೋಲ್ಡ್ ಆಗಿದ್ದಾರೆ. ಬಿಕಿನಿ ಧರಿಸಿ ಬೀಚ್ ನಲ್ಲಿ ಫೋಟೋಗೆ ಪೋಸ್ ನೀಡಿರುವ ಮಾನುಷಿ ಫೋಟೋ ನೋಡಿದ್ರೆ ಈಗಲೇ ಬೇಸಿಗೆಯನ್ನು ನೆನಪಿಸಿದಂತಿದೆ.
ಮಾನುಷಿ ಛಿಲ್ಲರ್ ಅವರು 2017ರಲ್ಲಿ ವಿಶ್ವಸುಂದರಿ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದರು. 2010ರಲ್ಲಿ ಪ್ರಿಯಾಂಕಾ ಛೋಪ್ರಾ ಬಳಿಕ ಭಾರತಕ್ಕೆ ಯಾವುದೇ ಮಿಸ್ ವರ್ಲ್ಡ್ ಪಟ್ಟ ಸಿಕ್ಕಿರಲಿಲ್ಲ. 17 ವರ್ಷದ ಬಳಿಕ ಮಾನುಷಿ ಛಿಲ್ಲರ್ ವಿಶ್ವ ಸುಂದರಿ ಪಟ್ಟವನ್ನು ಅಲಂಕರಿಸಿದ್ದರು.