ಬೆಂಗಳೂರು : ನ. 29 ರಿಂದ ಡಿ. 1ರವರೆಗೆ ‘ಬೆಂಗಳೂರು ಟೆಕ್ ಸಮ್ಮಿಟ್’ ಆಯೋಜನೆ ಮಾಡಲಾಗಿದೆ ಎಂದು ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದರು.
ಸುದ್ದಿಗಾರರ ಜೊತೆ ಮಾತನಾಡಿದ ಸಚಿವರು ಬೆಂಗಳೂರಿನ ಅರಮನೆ ಮೈದಾನದಲ್ಲಿ ಟೆಕ್ ಸಮ್ಮಿಟ್ ನಡೆಯಲಿದ್ದು, ಬ್ರೇಕಿಂಗ್ ಬೌಂಡರಿ ಘೋಷ ವಾಕ್ಯದೊಂದಿಗೆ ಸಮ್ಮಿಟ್ ನಡೆಯಲಿದೆ. ಸಿಎಂ ಸಿದ್ದರಾಮಯ್ಯ ಸಮ್ಮಿಟ್ ಉದ್ಘಾಟಿಸಲಿದ್ದಾರೆ ಎಂದರು.
ಏಷ್ಯಾದ ಅತಿದೊಡ್ಡ ಟೆಕ್ ಸಮ್ಮಿಟ್ ಇದಾಗಿದ್ದು, ಸಮ್ಮಿಟ್ನಲ್ಲಿ 30 ದೇಶಗಳ 350ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗಿಯಾಗಲಿದ್ದಾರೆ ಎಂದರು. ಚಂದ್ರಯಾನದಲ್ಲಿ ಭಾಗಿಯಾದ ಸಣ್ಣ ಸಣ್ಣ ಕಂಪನಿಗಳಿಗೆ ಸಹ ಸಮ್ಮಿಟ್ನಲ್ಲಿ ಪ್ರದರ್ಶನಕ್ಕೆ ಅವಕಾಶ ನೀಡಲಾಗುತ್ತದೆ ಎಂದು ತಿಳಿಸಿದರು. ಐಟಿ ಮತ್ತು DeepTech, Metaverse ಮತ್ತು WEB 3.0, ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್ಗಳು, ಅನಿಮೇಷನ್, ವಿಷುಯಲ್ ಎಫೆಕ್ಟ್ಸ್, ಗೇಮಿಂಗ್ ನಂತಹ ತಂತ್ರಜ್ಞಾನ-ಸಂಬಂಧಿತ ಕ್ಷೇತ್ರಗಳಲ್ಲಿ ಭಾರತದ ಕ್ಷಿಪ್ರ ಪ್ರಗತಿಯನ್ನು ಪ್ರದರ್ಶಿಸುವ ಇದು ವೇದಿಕೆಯಾಗಲಿದೆ ಎಂದರು.