ಭುವನೇಶ್ವರ: 2006 ರಲ್ಲಿ ರಾಜಸ್ಥಾನದ ಅಲ್ವಾರ್ ನಲ್ಲಿ ಜರ್ಮನ್ ಪ್ರವಾಸಿ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಬಿಟ್ಟಿ ಹೊತ್ರಾ ಮೊಹಾಂತಿ ಭಾನುವಾರ ತಡರಾತ್ರಿ ಏಮ್ಸ್-ಭುವನೇಶ್ವರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ನಿಧನ ಹೊಂದಿದ್ದಾನೆ.
ಮೂಲಗಳ ಪ್ರಕಾರ ಆತ ಹೊಟ್ಟೆಯ ಕ್ಯಾನ್ಸರ್ ನಿಂದ ಬಳಲುತ್ತಿದ್ದರು ಮತ್ತು ಬೆಳಿಗ್ಗೆ 12 ಗಂಟೆ ಸುಮಾರಿಗೆ ನಿಧನರಾದರು.ಒಡಿಶಾದ ಮಾಜಿ ಡಿಜಿಪಿ ಬಿದ್ಯಾ ಭೂಷಣ್ ಮೊಹಾಂತಿ ಅವರ ಪುತ್ರರಾಗಿರುವ ಅವರು ಅನಾರೋಗ್ಯದಿಂದ ಬಳಲುತ್ತಿರುವ ತಾಯಿಯನ್ನು ನೋಡಿಕೊಳ್ಳಲು ಪೆರೋಲ್ ಮೇಲೆ ಭುವನೇಶ್ವರದಲ್ಲಿದ್ದರು ಎಂದು ಮೂಲಗಳು ತಿಳಿಸಿವೆ.
ಏಪ್ರಿಲ್ 12, 2006 ರಂದು ಬಂಧನಕ್ಕೊಳಗಾದ 15 ದಿನಗಳಲ್ಲಿ ಅಲ್ವಾರ್ ನ ಫಾಸ್ಟ್ ಟ್ರ್ಯಾಕ್ ವಿಚಾರಣಾ ನ್ಯಾಯಾಲಯವು ಅವರನ್ನು ದೋಷಿ ಎಂದು ಘೋಷಿಸಿತು. ಅದೇ ವರ್ಷ ಅಕ್ಟೋಬರ್ 4 ರಂದು ರಾಜಸ್ಥಾನ ಹೈಕೋರ್ಟ್ ಅವರ ಶಿಕ್ಷೆಯನ್ನು ಎತ್ತಿಹಿಡಿದಿತು.