ಕೋವಿಡ್ನಿಂದಾಗಿ ಜನಸಾಮಾನ್ಯರು ಇನ್ನಿಲ್ಲದ ಕಷ್ಟವನ್ನ ಅನುಭವಿಸುತ್ತಿದ್ದಾರೆ. ಕುಟುಂಬದ ಜವಾಬ್ದಾರಿ ಒಂದೆಡೆಯಾದರೆ ಕುಟುಂಬಸ್ಥರ ಜೀವ ಉಳಿಸುವ ಕೆಲಸ ಕೂಡ ಮಾಡಬೇಕಾದ ಅನಿವಾರ್ಯಕತೆ ಎದುರಾಗಿದೆ. ಇದೇ ರೀತಿಯ ಪ್ರಕರಣದವೊಂದರಲ್ಲಿ ಮಹಿಳೆಯೊಬ್ಬರು ಕೊರೊನಾ ಸೋಂಕಿಗೆ ಒಳಗಾಗಿದ್ದ ತನ್ನ ಪತಿಯ ತಂದೆಯನ್ನ ಹೆಗಲ ಮೇಲೆ ಗೊತ್ತು ಕೋವಿಡ್ ಕೇಂದ್ರಕ್ಕೆ ಸಾಗಿಸುವ ಮೂಲಕ ಮಾದರಿಯಾಗಿದ್ದಾಳೆ.
ಓಡಿಶಾದ ನಿಹಾರಿಕಾಳ ಪತಿ ಸೂರಜ್ ಕೆಲಸದ ಕಾರಣಕ್ಕೆ ಮನೆಯಿಂದ ದೂರವಿದ್ದರು. ಹೀಗಾಗಿ ನಿಹಾರಿಕಾ ಪತಿಯ ಮನೆಯ ಜವಾಬ್ದಾರಿಯನ್ನ ಹೊತ್ತಿದ್ದರು. ಪತಿಯ ತಂದೆ 75 ವರ್ಷದ ತಾಲೇಶ್ವರ್ ದಾಸ್ ಕೋವಿಡ್ 19 ಸೋಂಕಿಗೆ ಒಳಗಾಗಿದ್ದರು. ಇದಾದ ಬಳಿಕ ಜಿಲ್ಲಾಡಳಿತ ತಾಲೇಶ್ವರ ದಾಸ್ಗೆ ಆಸ್ಪತ್ರೆಗೆ ದಾಖಲಾಗಿ ಹಾಗೂ ನಿಹಾರಿಕಾ ಮನೆಯಲ್ಲೇ ಐಸೋಲೇಟ್ ಆಗಿ ಎಂದು ಹೇಳಿತ್ತು.
ವಯಸ್ಸಾದ ಮಾವನನ್ನ ಒಬ್ಬಂಟಿಯಾಗಿ ಆಸ್ಪತ್ರೆಯಲ್ಲಿ ಬಿಡಲು ನಿಹಾರಿಕಾ ಸುತಾರಾಂ ಒಪ್ಪಿಲ್ಲ. ಇದಾದ ಬಳಿಕ ಡಾ. ಸಂಗೀತಾ ಧಾತ್ ಹಾಗೂ ಆರೋಗ್ಯ ಸಿಬ್ಬಂದಿ ಪಿಂಟು ಹೀರಾ ಎಂಬವರು ಇವರಿಬ್ಬರಿಗೂ ಆಂಬುಲೆನ್ಸ್ ವ್ಯವಸ್ಥೆ ಮಾಡಿಸಿ ನಾಗಾನ್ ಭೋಗೇಶ್ವರಿ ಫುಖಕನಿ ಸಿವಿಲ್ ಆಸ್ಪತ್ರೆಯಲ್ಲಿ ಬೆಡ್ ಅರೇಂಜ್ ಮಾಡಿದ್ದಾರೆ.
ಆಂಬುಲೆನ್ಸ್ಗೆ ತೆರಳುವ ಮುನ್ನ ನಿಹಾರಿಕಾ ತನ್ನ ಮಾವನನ್ನ ಹೆಗಲ ಮೇಲೆ ಹೊತ್ತು ತಂದಿದ್ದು ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಪತಿಯ ಅನುಪಸ್ಥಿತಿಯ ನಡುವೆಯೂ ಮಾವನನ್ನ ತಂದೆಯಂತೆ ಕಂಡ ನಿಹಾರಿಕಾ ಬಗ್ಗೆ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ.