ತಂತಮ್ಮ ಜಾತಿಗಳ ವ್ಯಾಪ್ತಿಯಿಂದ ಆಚೆಗೆ ಮದುವೆಯಾದರು ಎಂಬ ಕಾರಣಕ್ಕೆ ನವಜೋಡಿಗೆ 25 ಲಕ್ಷ ರೂಪಾಯಿಗಳ ದಂಡ ವಿಧಿಸಿದ ಘಟನೆಯೊಂದು ಒಡಿಶಾದ ಗ್ರಾಮವೊಂದರಲ್ಲಿ ಜರುಗಿದೆ.
ಕೆಯೋಂಜಾರ್ ಜಿಲ್ಲೆಯ ನೀಲಾಜಿಹರನ್ ಎಂಬ ಬುಡಕಟ್ಟು ಗ್ರಾಮದ ನಿವಾಸಿ ಮಹೇಶ್ವರ್ ಬಸ್ಕೇ ಬೇರೊಂದು ಸಮುದಾಯದ ಹುಡುಗಿಯೊಬ್ಬರನ್ನು ಆರು ತಿಂಗಳ ಹಿಂದೆ ಮದುವೆಯಾಗಿದ್ದರು. ಈ ವಿಚಾರವಾಗಿ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ ಬಳಿಕ ಊರು ಬಿಟ್ಟು ಹೋಗಿದ್ದ ನವಜೋಡಿ, ಕೋವಿಡ್ ಕಾರಣದಿಂದ ತಮ್ಮ ಮನೆಗಳಿಗೆ ವಾಪಸ್ ಆಗಿದೆ.
ಬಿದ್ದರೂ ಮೇಲೆದ್ದು ರೋಲರ್ ಸ್ಕೇಟಿಂಗ್ ಮುಂದುವರೆಸಿದ 4ರ ಬಾಲೆ
ಊರಿಗೆ ಹಿಂದಿರುಗಿದ ಜೋಡಿಗೆ ಗ್ರಾಮ ಸಭೆಯೊಂದರ ವೇಳೆ 25.6 ಲಕ್ಷ ರೂಪಾಯಿಗಳ ದಂಡ ಹೇರಲಾಗಿದೆ.
ಪ್ರಕರಣದ ತನಿಖೆಯನ್ನು ನಡೆಸುತ್ತಿರುವ ಘಾಸಿಪುರಾ ಪೊಲೀಸ್ ಠಾಣಾಧಿಕಾರಿ ಮನೋರಂಜನ್ ಬಿಸಿ, ಆನಂದ್ಪುರ ಕೋರ್ಟ್ ಒಂದರ ನಿರ್ದೇಶನದಂತೆ ತನಿಖೆ ನಡೆಸುತ್ತಿರುವುದಾಗಿ ಹೇಳಿದ್ದಾರೆ.