ಚಿಕ್ಕಮಗಳೂರು: ಶುಕ್ರವಾರ ಒಡಿಶಾದಲ್ಲಿ ಸಂಭವಿಸಿದ ಭೀಕರ ರೈಲು (railway accident) ಅಪಘಾತದಲ್ಲಿ ಕರ್ನಾಟಕದ 110 ಪ್ರಯಾಣಿಕರು ರೈಲಿನಲ್ಲಿ ಪ್ರಯಾಣಿಸುತ್ತಿದ್ದು, ಎಲ್ಲರೂ ಅದೃಷ್ಟವಶಾತ್ ಪಾರಾಗಿದ್ದಾರೆ.
ದುರಂತ ನಡೆದ ಸಂದರ್ಭದಲ್ಲಿ ಕಳಸದ 110 ಮಂದಿ ಸುಮೇದ್ ಸಿಖರ್ಜಿ ಯಾತ್ರೆಗೆಂದು ಹೊರಟಿದ್ದರು. ಅಪಘಾತದಲ್ಲಿ 110 ಮಂದಿ ಬಚಾವ್ ಆಗಿದ್ದಾರೆ.
ಇವರೆಲ್ಲರೂ ಕಳಸ, ಸಂಸೆ, ಹೊರನಾಡು ಸುತ್ತಮುತ್ತಲಿನ ಜೈನ ಸಮುದಾಯದ 110 ಜನರು 24 ನೇ ಜೈನ ತೀರ್ಥಂಕರರು ಮೋಕ್ಷ ಹೊಂದಿದ್ದ ಪುಣ್ಯ ಕ್ಷೇತ್ರಕ್ಕೆ ಹೊರಟಿದ್ದರು. ಸದ್ಯ ಎಲ್ಲರೂ ದೇವರ ದಯೆಯಿಂದ ಬಚಾವ್ ಆಗಿದ್ದಾರೆ. ರೈಲಿನ ಎಸ್3, ಎಸ್4 ಬೋಗಿಯಲ್ಲಿ ಪ್ರಯಾಣ ಮಾಡುತ್ತಿದ್ದರು.
ಒಡಿಶಾದ ಬಾಲಸೋರ್ ಪ್ರದೇಶದಲ್ಲಿ ನಿನ್ನೆ ಭೀಕರ ರೈಲು ಅಪಘಾತ (railway accident) ನಡೆದಿದ್ದು, ಗೂಡ್ಸ್ ರೈಲಿಗೆ ಎಕ್ಸ್ಪ್ರೆಸ್ ರೈಲು ಡಿಕ್ಕಿ ಹೊಡೆದು ಮೃತಪಟ್ಟವರ ಸಂಖ್ಯೆ 207 ಕ್ಕೆ ಏರಿಕೆಯಾಗಿದೆ. ರೈಲು ಅಪಘಾತದಲ್ಲಿ ಮೃತಪಟ್ಟವರಿಗೆ ಹಾಗೂ ಗಾಯಾಳುಗಳಿಗೆ ಕೇಂದ್ರ ರೈಲ್ವೆ ಇಲಾಖೆ (Central Railway Department) ಪರಿಹಾರ ಘೋಷಣೆ ಮಾಡಿದ್ದು, ಮೃತರ ಕುಟುಂಬಕ್ಕೆ 10 ಲಕ್ಷ ಹಾಗೂ ಗಾಯಗೊಂಡವರಿಗೆ 2 ಲಕ್ಷ ರೂ. ಪರಿಹಾರ ಘೋಷಿಸಿದೆ.