Odisha train accident: ದುರಂತದಲ್ಲಿ ನಾಪತ್ತೆಯಾದವರ ಬಗ್ಗೆ ಮಾತನಾಡುತ್ತಾ ಭಾವುಕರಾದ ಸಚಿವ ಅಶ್ವಿನಿ ವೈಷ್ಣವ್ 05-06-2023 11:52AM IST / No Comments / Posted In: Latest News, India, Live News ಒಡಿಶಾದ ಬಾಲಸೋರ್ನಲ್ಲಿ ಸಂಭವಿಸಿದ 3 ರೈಲು ಅಪಘಾತ ದುರಂತ ಇಡೀ ದೇಶವನ್ನ ಬೆಚ್ಚಿಬೀಳಿಸಿದೆ. 270ಕ್ಕೂ ಹೆಚ್ಚು ಪ್ರಯಾಣಿಕರು ಪ್ರಾಣ ಕಳೆದುಕೊಂಡ ಈ ಘಟನೆಗೆ ಭಾರತವೇ ಮಮ್ಮಲ ಮರುಗಿದೆ. ಸುದ್ದಿಗಾರರೊಂದಿಗೆ ಮಾತನಾಡುತ್ತಾ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಗದ್ಗದಿತರಾದರು. ದುರಂತದಲ್ಲಿ ನಾಪತ್ತೆಯಾದವರ ಬಗ್ಗೆ ಮಾತನಾಡುವಾಗ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಭಾನುವಾರ ಭಾವುಕರಾದರು. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ನಾಪತ್ತೆಯಾದವರನ್ನು ಆದಷ್ಟು ಬೇಗ ಅವರ ಕುಟುಂಬ ಸದಸ್ಯರೊಂದಿಗೆ ಸೇರಿಸುವುದು ನಮ್ಮ ಉದ್ದೇಶವಾಗಿದೆ ಎಂದರು. “ನಾಪತ್ತೆಯಾದವರ ಎಲ್ಲ ಕುಟುಂಬದ ಸದಸ್ಯರು ಅವರನ್ನು ಆದಷ್ಟು ಬೇಗ ಪತ್ತೆ ಹಚ್ಚುವುದು ನಮ್ಮ ಉದ್ದೇಶವಾಗಿದೆ. ನಮ್ಮ ಜವಾಬ್ದಾರಿ ಇನ್ನೂ ಮುಗಿದಿಲ್ಲ ಎಂದು ಹೇಳುತ್ತಾ ಭಾವುಕರಾದ ಅಶ್ವಿನಿ ವೈಷ್ಣವ್ ಅಪಘಾತ ಸಂಭವಿಸಿದ ರೈಲು ವಿಭಾಗದ ಮರುಸ್ಥಾಪನೆಯನ್ನು ಘೋಷಿಸಿದರು. ವಿಭಾಗದಿಂದ ಮೂರು ರೈಲುಗಳು ಹೊರಟಿವೆ. ನಾವು ಇಂದು ರಾತ್ರಿ ಸುಮಾರು ಏಳು ರೈಲು ಓಡಿಸಲು ಯೋಜಿಸಿದ್ದೇವೆ. ನಾವು ಈ ಸಂಪೂರ್ಣ ವಿಭಾಗವನ್ನು ಸಾಮಾನ್ಯೀಕರಣದತ್ತ ಕೊಂಡೊಯ್ಯಬೇಕಾಗಿದೆ ಎಂದು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರೊಂದಿಗೆ ರೈಲು ಅಪಘಾತದ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದ ವೈಷ್ಣವ್ ಹೇಳಿದರು. ಬಾಲಸೋರ್ನಲ್ಲಿ ಅಪಘಾತ ಸಂಭವಿಸಿದ ವಿಭಾಗದ ಮೊದಲ ರೈಲು ಭಾನುವಾರ ರಾತ್ರಿ 10.40 ರ ಸುಮಾರಿಗೆ ತನ್ನ ಪ್ರಯಾಣವನ್ನು ಪ್ರಾರಂಭಿಸಿತು. 275 ಪ್ರಯಾಣಿಕರು ಸಾವನ್ನಪ್ಪಿದ ಅಪಘಾತ ಘಟನೆಯ 51 ಗಂಟೆಗಳ ನಂತರ ಹೊರಟ ಗೂಡ್ಸ್ ರೈಲನ್ನು ಅಶ್ವಿನಿ ವೈಷ್ಣವ್ ವೀಕ್ಷಿಸಿದರು. Down-line restoration complete. First train movement in section. pic.twitter.com/cXy3jUOJQ2 — Ashwini Vaishnaw (मोदी का परिवार) (@AshwiniVaishnaw) June 4, 2023 Up-line train movement also started. pic.twitter.com/JQnd7yUuEB — Ashwini Vaishnaw (मोदी का परिवार) (@AshwiniVaishnaw) June 4, 2023