ಪುರುಷರಿಗೆ ಹೋಲಿಸಿದರೆ ಮಹಿಳೆಯರಿಗೆ ಕೆಲಸದ ಹೊರೆ ಒಂದಷ್ಟು ಹೆಚ್ಚೇ ಇರುತ್ತದೆ. ಆದರೂ ಅವೆಲ್ಲವನ್ನು ನಿಭಾಯಿಸಿಕೊಂಡು ಹೋಗುವ ಶಕ್ತಿಯೂ ಅವರದ್ದು. ಈ ರೀತಿ ಕಾರ್ಯಬದ್ಧತೆ ಪ್ರದರ್ಶಿಸಿ ವ್ಯಾಪಕ ಮೆಚ್ಚುಗೆ ಗಳಿಸಿದ ಒಡಿಶಾದ ನೈರ್ಮಲ್ಯ ಕಾರ್ಯಕರ್ತೆಯ ವಿಡಿಯೋ ವೈರಲ್ ಆಗಿದೆ.
ಪ್ರಧಾನ ಮಂತ್ರಿಯಿಂದ ಹಿಡಿದು ಅಧಿಕಾರಿಗಳ ಸ್ತರದಲ್ಲಿ ಕೆಲಸ ಮಾಡುವ ಮಹಿಳೆಯರು ತಮ್ಮ ಮಕ್ಕಳನ್ನು ಕಛೇರಿಗೆ ಹೊತ್ತುಕೊಂಡು ಹೋಗುತ್ತಿರುವುದನ್ನು ಕಾಣಬಹುದು. ಅವರ ಬಹು- ಕಾರ್ಯ ಪ್ರಯತ್ನಗಳು ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರಿಂದ ಮೆಚ್ಚುಗೆ ಪಡೆದಿವೆ.
ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋವೊಂದು ಒಡಿಶಾದಲ್ಲಿ ನೈರ್ಮಲ್ಯ ಕಾರ್ಯಕರ್ತೆಯೊಬ್ಬಳು ತನ್ನ ಮಗುವನ್ನು ಬೆನ್ನ ಮೇಲೆ ಹೊತ್ತುಕೊಂಡು ರಸ್ತೆಯನ್ನು ಸ್ವಚ್ಛಗೊಳಿಸುತ್ತಿರುವುದನ್ನು ತೋರಿಸಿದೆ.
ಮಳೆ ನಿರೀಕ್ಷೆಯಲ್ಲಿದ್ದ ರೈತರಿಗೆ ಇಲ್ಲಿದೆ ಖುಷಿ ಸುದ್ದಿ
ಈ ವಿಡಿಯೋವನ್ನು ಎಎನ್‌ಐ ಸುದ್ದಿ ಸಂಸ್ಥೆ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ಕೆಲಸಗಾರ್ತಿ ಲಕ್ಷ್ಮಿ ಮುಖಿ ಮಯೂರ್‌ಭಂಜ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದೆ.
ಕಳೆದ 10 ವರ್ಷಗಳಿಂದ ಬರಿಪದ ಪುರಸಭೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ಮನೆಯಲ್ಲಿ ಒಬ್ಬಂಟಿಯಾಗಿರುತ್ತೇನೆ, ಹೀಗಾಗಿ ಮಗುವನ್ನು ಬೆನ್ನ ಮೇಲೆ ಹೊತ್ತುಕೊಂಡು ಕೆಲಸ ಮಾಡಬೇಕಾಗಿದೆ. ನನಗೆ ತೊಂದರೆ ಇಲ್ಲ, ನನ್ನ ಕರ್ತವ್ಯವಾಗಿದೆ ಎಂದು ನೈರ್ಮಲ್ಯ ಕಾರ್ಯಕರ್ತೆ ತಿಳಿಸಿದ್ದಾರೆ.
ಬರಿಪಾದ ಪುರಸಭೆಯ ಅಧ್ಯಕ್ಷರಾದ ಬಾದಲ್ ಮೊಹಾಂತಿ, ಕೆಲವು ವೈಯಕ್ತಿಕ ಕಾರಣಗಳಿಂದ ಲಕ್ಷ್ಮಿ ಮುಖಿ ಅವರು ಮಗುವನ್ನು ಹೊತ್ತುಕೊಂಡೇ ಕೆಲಸ ಮಾಡಿದ್ದಾರೆ. ಆಕೆಯ ಅಗತ್ಯಗಳ ಮೇಲೆ ನಿಗಾ ಇಡಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ, ಯಾವುದೇ ಸಮಸ್ಯೆ ಇದ್ದರೂ ಆಕೆಯನ್ನು ಬೆಂಬಲಿಸುತ್ತೇವೆ” ಎಂದು ತಿಳಿಸಿದರು.
ಟ್ವಿಟ್ಟರ್‌ನಲ್ಲಿ ಈ ವಿಡಿಯೊ ಎರಡು ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು 7,400 ಕ್ಕೂ ಹೆಚ್ಚು ಲೈಕ್‌ಗಳನ್ನು ಸ್ವೀಕರಿಸಿದೆ, ಅನೇಕ ಬಳಕೆದಾರರು ಆಕೆಯ ಧೈರ್ಯವನ್ನು ಶ್ಲಾಘಿಸಿದ್ದಾರೆ.