ಒಂದು ಕೋಟಿ ರೂ.ಗಿಂತ ಹೆಚ್ಚಿನ ಮೌಲ್ಯದ ಹಾವಿನ ವಿಷವನ್ನು ಒಡಿಶಾ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇಲ್ಲಿನ ದೇವಘಡ ಜಿಲ್ಲೆಯಲ್ಲಿ ನಡೆಸಿದ ರೇಡ್ ವೇಳೆ ಈ ವಿಷದ ದಾಸ್ತಾನು ಪೊಲೀಸರಿಗೆ ಸಿಕ್ಕಿದೆ.
ಆರೋಪಿಗಳನ್ನು ರಾಜ್ಯದ ಸಂಭಾಲ್ಪುರದ ಸಾಖಿಪಾಡಾದ ರಂಜನ್ ಕುಮಾರ್ ಪಧಿ ಹಾಗೂ ಕೈಲಾಶ್ ಚಂದ್ರ ಎಂದು ಗುರುತಿಸಲಾಗಿದೆ. ಇವರಿಬ್ಬರೂ ಹಾವಿನ ವಿಷವನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದ ವೇಳೆ ಪೊಲೀಸರು ಅವರನ್ನು ಬಂಧಿಸಿದ್ದಾರೆ.
ಕಲ್ಯಾಣ ಮಂಟಪ ಜಲಾವೃತ: ಮದುವೆ ಸಂಭ್ರಮಕ್ಕೆ ಮಳೆ ಅಡ್ಡಿ
ಹಾವಿನ ವಿಷವನ್ನು ಮದ್ದುಗಳ ಕಂಪನಿಗಳಿಗೆ ಅಕ್ರಮವಾಗಿ ಮಾರಾಟ ಮಾಡಲಾಗುತ್ತದೆ. ಇಂಥ ಮಂದಿಯಿಂದ ಅಗ್ಗದ ದರದಲ್ಲಿ ಹಾವಿನ ವಿಷ ಕ್ರೋಢೀಕರಿಸಿಕೊಳ್ಳಲು ಮದ್ದು ಕಂಪನಿಗಳು ಮುಂದಾಗುತ್ತವೆ ಎಂದು ವೈದ್ಯ ಸೂರ್ಯ ಪ್ರಕಾಶ್ ಚೌಧರಿ ತಿಳಿಸಿದ್ದಾರೆ.
ಆಪಾದಿತರನ್ನು ತನಿಖೆ ನಡೆಸಲು ಕಸ್ಟಡಿಯಲ್ಲಿ ಇರಿಸಿಕೊಳ್ಳುವುದಾಗಿ ದೇವಘಡದ ಪೊಲೀಸ್ ವರಿಷ್ಠಾಧಿಕಾರಿ ರಾಜ್ ಕಿಶೋರ್ ಪಾಯ್ಕಾರಿ ತಿಳಿಸಿದ್ದಾರೆ.