
500ಕ್ಕೂ ಹೆಚ್ಚಿನ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾದ ನಟೋರಿಯಸ್ ಕ್ರಿಮಿನಲ್ ಹೇಮಂತ್ ದಾಸ್‌ನನ್ನು ಒಡಿಶಾ ಪೊಲೀಸರು ಬಂಧಿಸಿದ್ದಾರೆ. ರಾಜ್ಯಾದ್ಯಂತ ಕಳೆದ ಮೂರು ದಶಕಗಳಿಂದಲೂ ಈತನ ಕ್ರಮಿನಲ್ ಚಟುವಟಿಕೆಗಳು ಎಗ್ಗಿಲ್ಲದೇ ಸಾಗಿತ್ತು.
ಮನೆಗಳಿಗೆ ಭಾರೀ ಧೈರ್ಯದಿಂದ ಕನ್ನ ಹಾಕುತ್ತಿದ್ದ ಹೇಮಂತ್ ತನ್ನ ರಾತ್ರಿಗಳನ್ನು ಪಂಚತಾರಾ ಹೊಟೇಲ್‌ಗಳಲ್ಲಿ ಕಳೆಯುವಷ್ಟು ಮೋಜಿನ ಜೀವನ ನಡೆಸುತ್ತಿದ್ದ. ದೇಶದ ಅನೇಕ ಭಾಗಗಳಿಗೆ ಸಂಚರಿಸುತ್ತಿದ್ದ ಈತ ತಾನು ಲೂಟಿ ಮಾಡಿದ ದುಡ್ಡನ್ನು ಕಾಲ್‌ಗರ್ಲ್‌ಗಳ ಮೇಲೆ ಎಸೆಯುತ್ತಿದ್ದ.
ನಿಮ್ಮ ಪ್ರತಿಯೊಂದು ಚಲನೆ ಟ್ರಾಕ್ ಮಾಡುತ್ತೆ ಗೂಗಲ್: ಇದನ್ನು ತಡೆಗಟ್ಟಲು ಇಲ್ಲಿದೆ ಟಿಪ್ಸ್
“1986ರಿಂದಲೂ ಹೀಗೆ ದುಡ್ಡು ಮಾಡುವ ಕಾಯಕಕ್ಕೆ ಒಗ್ಗಿದ್ದೇನೆ. ಡಕಾಯಿತನೊಬ್ಬನನ್ನು ಭೇಟಿಯಾದ ನಾನು ಆತನೊಂದಿಗೆ ನಿಕಟತೆ ಬೆಳೆಸಿಕೊಂಡು, ಈ ಕಸುಬು ಕಲಿತೆ. ನಾನು ಕಳೆದ 35 ವರ್ಷಗಳಲ್ಲಿ ಕಳ್ಳತನದಿಂದಲೇ 4-5 ಕೋಟಿ ರೂಪಾಯಿ ಸಂಪಾದಿಸಿದ್ದೇನೆ. ಐಷಾರಾಮಿ ಜೀವನ ನಡೆಸಲೆಂದೇ ನಾನು ನನ್ನೆಲ್ಲಾ ದುಡ್ಡು ಕಳೆದಿದ್ದೇನೆ. ಇಂಥ ಚಟುವಟಿಕೆಗಳಲ್ಲಿ ಭಾಗಿಯಾಗದಿರಿ ಎಂದು ಕೇಳಿಕೊಳ್ಳುತ್ತೇನೆ” ಎಂದು ಹೇಮಂತ್ ದಾಸ್ ಹೇಳಿಕೊಂಡಿದ್ದಾನೆ.
ವಿಶ್ವಸಂಸ್ಥೆಯಲ್ಲಿ ಮತ್ತೆ ಪಾಕ್ ಬಣ್ಣ ಬಯಲು ಮಾಡಿದ ಭಾರತ: ಹುತಾತ್ಮರಂತೆ ಲಾಡೆನ್ ನಂತಹ ಉಗ್ರರ ವೈಭವೀಕರಣ ಎಂದು ತರಾಟೆ
1980ರ ದಶಕದಲ್ಲಿ ಗಲಭೆ ಸಂಬಂಧ ಮೊದಲ ಬಾರಿಗೆ ಬಂಧನವಾದ ವೇಳೆ, ಭುವನೇಶ್ವರ ಬಿಜೆಬಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಹೇಮಂತ್, ಜೈಲಿನಲ್ಲಿ ವಾಸವಿದ್ದ ವೇಳೆ ಡಕಾಯಿತನೊಬ್ಬನೊಂದಿಗೆ ನಿಕಟತೆ ಬೆಳೆಸಿಕೊಂಡು ಈ ಕಸುಬು ಕಲಿತಿದ್ದಾನೆ. 1986ರಿಂದ ಆಚೆಗೆ ವೃತ್ತಿಪರ ಕಳ್ಳನಾದ ಹೇಮಂತ್, ಒಡಿಶಾ ಹಾಗೂ ಅಕ್ಕಪಕ್ಕದ ರಾಜ್ಯಗಳಲ್ಲಿ ಅನೇಕ ಡಕಾಯಿತಿಗಳಲ್ಲಿ ಭಾಗಿಯಾಗಿದ್ದಾನೆ. ಭುವನೇಶ್ವರದಲ್ಲೇ 100ಕ್ಕೂ ಹೆಚ್ಚು ಹಾಗೂ ಒಟ್ಟಾರೆ 500ಕ್ಕೂ ಹೆಚ್ಚಿನ ಡಕಾಯಿತಿ ಪ್ರಕರಣಗಳಲ್ಲಿ ತಾನು ಮಾಡಿರುವುದಾಗಿ ಹೇಮಂತ್ ಒಪ್ಪಿಕೊಂಡಿದ್ದಾನೆ.
ಡ್ರಾಪ್ ಕೊಡುವ ನೆಪದಲ್ಲಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ
ಕಟಕ್‌ನಲ್ಲಿ ಡಕಾಯಿತಿ ಮಾಡಲು ಸಜ್ಜಾಗುತ್ತಿದ್ದ ವೇಳೆ ಆಪಾದಿತನನ್ನು ಬಂಧಿಸಲಾಗಿದೆ. ಭುವನೇಶ್ವರದಲ್ಲಿ ಡಕಾಯಿತಿಯ ಯತ್ನದಲ್ಲಿದ್ದ ವೇಳೆ 2018ರಲ್ಲಿ ಬಂಧಿಯಾಗಿದ್ದ ಈತ 2020ರಲ್ಲಿ ಕಳೆದ ಬಾರಿ ಪೊಲೀಸರ ಕೈಗೆ ಸಿಕ್ಕಿದ್ದ. ಬಳಿಕ ಆತನನ್ನು ಈ ವರ್ಷದ ಜುಲೈನಲ್ಲಿ ಬಿಡುಗಡೆ ಮಾಡಲಾಗಿತ್ತು.
“ಹೇಮಂತ್ ಬಹುತೇಕ ನಗದು ಕದಿಯುವುದರಲ್ಲಿ ಭಾಗಿಯಾಗಿದ್ದು, ರಜಾ ದಿನಗಳಲ್ಲಿ ಗ್ಯಾಂಗ್ಟಾಕ್, ಶಿಮ್ಲಾ, ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ದೇಶದ ಅನೇಕ ಭಾಗಗಳಿಗೆ ತೆರಳುತ್ತಿದ್ದ. ಸರಳ ಉಪಕರಣ ಬಳಸಿ ಕಳ್ಳತನ ಮಾಡುತ್ತಿದ್ದ ಈತನನ್ನು ’ಕ್ರೋಬಾರ್ ಮನುಷ್ಯ’ ಎಂದು ಕರೆಯಲಾಗುತ್ತಿತ್ತು,” ಎಂದು ಭುವನೇಶ್ವರ ಡಿಸಿಪಿ ತಿಳಿಸಿದ್ದಾರೆ.