ಒಡಿಶಾ ಶಾಸಕ ಪೂರ್ಣ ಚಂದ್ರ ಸ್ವೈನ್ ಕೊನೆಗೂ 10ನೇ ತರಗತಿ ಬೋರ್ಡ್ ಪರೀಕ್ಷೆ ಪಾಸ್ ಮಾಡಿದ್ದಾರೆ. 49 ವರ್ಷದ ಬಿಜು ಜನತಾ ದಳದ ಶಾಸಕ ಪೂರ್ಣ ಚಂದ್ರ, ಬಿ2 ಗ್ರೇಡ್ ನಲ್ಲಿ ಪರೀಕ್ಷೆ ಪಾಸ್ ಆಗಿದ್ದಾರೆ. 500 ಅಂಕಗಳಿಗೆ 340 ಅಂಕ ಗಳಿಸಿ ಪೂರ್ಣ ಚಂದ್ರ ಸ್ವೈನ್ ಪಾಸ್ ಆಗಿದ್ದಾರೆ.
ಗಂಜಾಂ ಜಿಲ್ಲೆಯ ಸೂರಾದ ಎಸ್ಬಿ ಪ್ರೌಢಶಾಲೆಯಲ್ಲಿ ಅವರು ಪರೀಕ್ಷೆ ಬರೆದಿದ್ದರು. 5,233 ವಿದ್ಯಾರ್ಥಿಗಳ ಜೊತೆ ಪೂರ್ಣ ಚಂದ್ರ ಪರೀಕ್ಷೆ ಬರೆದಿದ್ದರು. ಮೂರು ಬಾರಿ ಶಾಸಕರಾಗಿರುವ ಪೂರ್ಣ ಚಂದ್ರ,ಚಿತ್ರಕಲೆಯಲ್ಲಿ ಅತ್ಯಧಿಕ 85 ಅಂಕ ಗಳಿಸಿದ್ದಾರೆ. ಇಂಗ್ಲೀಷ್ ನಲ್ಲಿ ಕಡಿಮೆ 44 ಅಂಕ ಗಳಿಸಿದ್ದಾರೆ. ಹೋಮ್ ಸೈನ್ಸ್ ನಲ್ಲಿ 83 ಅಂಕ ಹಾಗೂ ಸಾಮಾಜಿ ವಿಜ್ಞಾನದಲ್ಲಿ 61 ಅಂಕ ಗಳಿಸಿದ್ದಾರೆ. ಒಡಿಯಾಕ್ಕೆ 67 ಅಂಕ ಬಿದ್ದಿದೆ.
ಕಳೆದ ತಿಂಗಳು ಪರೀಕ್ಷೆ ನಡೆದಿತ್ತು. ಬೋರ್ಡ್ ಆಫ್ ಸೆಕೆಂಡರಿ ಎಜ್ಯುಕೇಷನ್ ಆಫ್ ಲೈನ್ ನಲ್ಲಿ ಫಲಿತಾಂಶ ಪ್ರಕಟಿಸಿದೆ. ಆರೋಗ್ಯದ ದೃಷ್ಟಿಯಿಂದ ಶಾಸಕರಿಗೆ ಪ್ರತ್ಯೇಕ ಕೊಠಡಿಯನ್ನು ನೀಡಲಾಗಿತ್ತು. ಆಡಳಿತ ಪಕ್ಷದ ಶಾಸಕರು ಈ ಹಿಂದೆ ಹಲವು ಬಾರಿ 10ನೇ ತರಗತಿ ಪರೀಕ್ಷೆಗೆ ಹಾಜರಾಗಲು ಪ್ರಯತ್ನಿಸಿದ್ದರು. ಆದರೆ ರಾಜಕೀಯ ಮತ್ತು ಸಾಮಾಜಿಕ ಚಟುವಟಿಕೆಗಳಿಂದ ಹಾಜರಾಗಲು ಸಾಧ್ಯವಾಗಿರಲಿಲ್ಲ.