
ಧೆಂಕನಾಲ್: ಒಡಿಶಾದ ಧೆಂಕನಾಲ್ ಜಿಲ್ಲೆಯ ಧನಿಯಾನಾಲಿ ಗ್ರಾಮದ ಮುಂಡಾ ಸಾಹಿಯಲ್ಲಿ ಕೋಳಿ ಸಾರು ಮಾಡದ ಪತ್ನಿಗೆ ಪತಿ ಕಪಾಳಮೋಕ್ಷ ಮಾಡಿದ್ದು, ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.
ಕೆಲಸಕ್ಕೆಂದು ಮನೆಯಿಂದ ಹೊರಡುವ ಮೊದಲು ಜೇನಾ ಮುಂಡಾ ಎಂಬಾತ ತನ್ನ ಪತ್ನಿ ಜೇನಾ ಕುಣಿಗೆ 100 ರೂ. ನೀಡಿದ್ದಾನೆ. ಭಾನುವಾರವಾದ ಕಾರಣ ಇಡೀ ಕುಟುಂಬಕ್ಕೆ ಕೋಳಿ ಕರಿ ಮಾಡಿಸುವಂತೆ ಕೇಳಿಕೊಂಡಿದ್ದಾನೆ.
ಸಂಜೆ ತಡವಾಗಿ ಮನೆಗೆ ಹಿಂದಿರುಗಿದ ಜೇನಾ ಮುಂಡಾ ಕೋಳಿ ಕರಿ ಬೇಯಿಸದ ಕಾರಣ ಪತ್ನಿ ಕುಣಿಯೊಂದಿಗೆ ಜಗಳವಾಡಿದ್ದಾನೆ. ಮಾತಿನ ಚಕಮಕಿ ವೇಳೆ ಕೋಪಗೊಂಡ ಜೇನಾ ಮುಂಡಾ ಪತ್ನಿ ಕುಣಿಗೆ ಬಲವಾದ ಹೊಡೆತ ನೀಡಿದ್ದರಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.
ಮಾಹಿತಿ ಪಡೆದ ಗಾಂಡಿಯಾ ಪೊಲೀಸ್ ಠಾಣೆಯ ಪೊಲೀಸರ ತಂಡ ಸ್ಥಳಕ್ಕೆ ತಲುಪಿ ಕುಣಿಯ ಶವವನ್ನು ಧೆಂಕನಲ್ ಜಿಲ್ಲಾ ಪ್ರಧಾನ ಕಚೇರಿ ಆಸ್ಪತ್ರೆಗೆ(DHH) ಮರಣೋತ್ತರ ಪರೀಕ್ಷೆಗೆ ಕಳುಹಿಸಿದೆ. ಪತ್ನಿಯನ್ನು ಕೊಂದ ಆರೋಪದ ಮೇಲೆ ಅವರು ಜೆನಾ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಕಳುಹಿಸಿದ್ದಾರೆ.
ಆಕೆಯ ಸಹೋದರ ಲಾಲ್ ಮೋಹನ್ ಬಿರುವಾ, ನಿನ್ನೆ ರಾತ್ರಿ 11 ಗಂಟೆ ಸುಮಾರಿಗೆ ಸಹೋದರಿಯ ಸಾವಿನ ಬಗ್ಗೆ ನಮಗೆ ತಿಳಿಸಲಾಯಿತು. ತಡರಾತ್ರಿಯಾಗಿದ್ದರಿಂದ ಬರಲು ಸಾಧ್ಯವಾಗಲಿಲ್ಲ. ಇಂದು ಬೆಳಿಗ್ಗೆ ಮನೆಗೆ ತಲುಪಿದ ನಂತರ, ಕೋಳಿ ಕರಿಗಾಗಿ ದಂಪತಿಗಳ ನಡುವೆ ಜಗಳ ನಡೆದಿದ್ದು, ನನ್ನ ಬಾವ ಕೋಪದ ಭರದಲ್ಲಿ ನನ್ನ ಸಹೋದರಿಯನ್ನು ಕೊಂದಿದ್ದಾನೆ ಎಂದು ನನಗೆ ತಿಳಿಯಿತು ಎಂದಿದ್ದಾರೆ.
ವೈಜ್ಞಾನಿಕ ತಂಡದ ಸಹಾಯದಿಂದ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.