ಜಾಜ್ ಪುರ: ಸೇಡು ತೀರಿಸಿಕೊಳ್ಳುವ ವಿಲಕ್ಷಣ ಪ್ರಕರಣದಲ್ಲಿ 45 ವರ್ಷದ ಬುಡಕಟ್ಟು ವ್ಯಕ್ತಿಯೊಬ್ಬ ಕಚ್ಚಿದ ಹಾವನ್ನೇ ತಾನೂ ಕಚ್ಚಿ ಸಾಯಿಸಿದ್ದಾನೆ. ಒಡಿಶಾದ ಜಾಜ್ ಪುರ ಜಿಲ್ಲೆಯ ದೂರದ ಹಳ್ಳಿಯಲ್ಲಿ ಘಟನೆ ನಡೆದಿದೆ.
ದನಗಡಿ ಬ್ಲಾಕ್ ವ್ಯಾಪ್ತಿಯ ಸಾಲಿಜಂಗಾ ಪಂಚಾಯತ್ ವ್ಯಾಪ್ತಿಯ ಗಂಭರಿಪತಿಯಾ ಗ್ರಾಮದ ಕಿಶೋರ್ ಭದ್ರ ಬುಧವಾರ ರಾತ್ರಿ ತನ್ನ ಗದ್ದೆಯಲ್ಲಿ ಕೆಲಸ ಮಾಡಿ ಮನೆಗೆ ಮರಳುತ್ತಿದ್ದಾಗ, ಆತನ ಕಾಲಿಗೆ ಹಾವು ಕಚ್ಚಿದೆ. ಸೇಡು ತೀರಿಸಿಕೊಳ್ಳಲು ಬಾದ್ರಾ ಹಾವನ್ನು ಸೆರೆಹಿಡಿದು ಅದನ್ನು ಕಚ್ಚಿ ಸಾಯಿಸುವಲ್ಲಿ ಯಶಸ್ವಿಯಾಗಿದ್ದಾನೆ.
ನಾನು ನಿನ್ನೆ ರಾತ್ರಿ ಕಾಲ್ನಡಿಗೆಯಲ್ಲಿ ಮನೆಗೆ ಹಿಂತಿರುಗುತ್ತಿದ್ದಾಗ ನನ್ನ ಕಾಲಿಗೆ ಏನೋ ಕಚ್ಚಿತು. ನಾನು ನನ್ನ ಟಾರ್ಚ್ ಅನ್ನು ಆನ್ ಮಾಡಿದೆ. ಅದು ವಿಷಕಾರಿ ಕ್ರೈಟ್ ಹಾವು ಎಂದು ಗೊತ್ತಾಯ್ತು. ಸೇಡು ತೀರಿಸಿಕೊಳ್ಳಲು ನಾನು ಹಾವನ್ನು ನನ್ನ ಕೈಯಲ್ಲಿ ತೆಗೆದುಕೊಂಡು ಪದೇ ಪದೇ ಕಚ್ಚಿದೆ. ಸ್ಥಳದಲ್ಲೇ ಹಾವು ಸತ್ತಿತು ಎಂದು ಕಿಶೋರ್ ಹೇಳಿದ್ದಾನೆ.
ಘಟನೆಯ ನಂತರ ಆತ ಸತ್ತ ಹಾವಿನೊಂದಿಗೆ ತನ್ನ ಗ್ರಾಮಕ್ಕೆ ಮರಳಿ ಬಂದು ತನ್ನ ಪತ್ನಿಗೆ ಸಂಪೂರ್ಣ ಕತೆ ಹೇಳಿದ್ದಾನೆ. ಈ ವಿಚಾರ ಸ್ನೇಹಿತರಿಗೆ ಗೊತ್ತಾಗಿದೆ. ಹತ್ತಿರದ ಆಸ್ಪತ್ರೆಗೆ ಭೇಟಿ ನೀಡುವಂತೆ ಅವರು ಸಲಹೆ ನೀಡಿದ್ದಾರೆ. ಆದರೆ ಆಸ್ಪತ್ರೆಗೆ ಹೋಗಲು ಕಿಶೋರ್ ನಿರಾಕರಿಸಿ ಅದೇ ರಾತ್ರಿ ಸಾಂಪ್ರದಾಯಿಕ ವೈದ್ಯರ ಬಳಿ ಸಲಹೆ ಪಡೆಯಲು ಹೋಗಿದ್ದಾನೆ.
ಅದೃಷ್ಟವಶಾತ್ ಹಾವು ಕಡಿತದಿಂದ, ಆತ ಹಾವು ಕಚ್ಚಿ ಸಾಯಿಸಿದ್ದರಿಂದ ಆತನ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ನಾನು ಹಳ್ಳಿಯ ಸಾಂಪ್ರದಾಯಿಕ ವೈದ್ಯರ ಬಳಿ ಹೋಗಿ ಗುಣಮುಖನಾಗಿದ್ದೇನೆ ಎಂದು ಹೇಳಿಕೊಂಡಿದ್ದಾನೆ.