ಒಡಿಶಾದಲ್ಲಿ ವನ್ಯಜೀವಿ ಅಪರಾಧಗಳ ಸಂಖ್ಯೆ ಹೆಚ್ಚಿದೆ. ಹೀಗಿರುವಾಗ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದ್ದು, ಒಡಿಶಾ ಪೊಲೀಸರು ದಿಯೋಗರ್ ಜಿಲ್ಲೆಯಲ್ಲಿ ಚಿರತೆ ಚರ್ಮವನ್ನು ವಶಪಡಿಸಿಕೊಂಡು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ರಿಯಾಮಲ್ ಅರಣ್ಯ ವಿಭಾಗದ ವ್ಯಾಪ್ತಿಯ ತುಹಿಲಾಮಲ್ ಬಳಿ ಮೂರು ಚಿರತೆ ಚರ್ಮಗಳನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನು ಚರ್ಮವನ್ನು ಮಾರುವ, ಡೀಲ್ ಮಾಡಿಕೊಳ್ಳಲು ಮುಂದಾಗಿದ್ದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
BREAKING: ಬಜರಂಗದಳ ಹರ್ಷ ಕೊಲೆ ಪ್ರಕರಣ ಆರೋಪಿಗಳ ಪೊಲೀಸ್ ಕಸ್ಟಡಿ ಅಂತ್ಯ
ವನ್ಯಜೀವಿ ಅಪರಾಧಗಳಿಗೆ ಕಡಿವಾಣ ಹಾಕಲು ತಳಮಟ್ಟದಲ್ಲಿ ಕೆಲಸ ಮಾಡುತ್ತಿರುವ ಒಡಿಶಾ ಪೊಲೀಸರಿಗೆ, ತಳಮಟ್ಟದಿಂದಲೇ ಮಾಹಿತಿ ಲಭ್ಯವಾದ ಮೇಲೆ ಈ ಕೃತ್ಯ ಬಯಲಾಗಿದೆ. ನಿರ್ದಿಷ್ಟ ಮಾಹಿತಿ ಪಡೆದ ಪೊಲೀಸರು, ಕಳ್ಳರನ್ನು, ಕಳ್ಳ ಮಾಲಿನ ಜೊತೆ ವಶಪಡಿಸಿಕೊಂಡಿದ್ದಾರೆ.
ಸಧ್ಯ, ಬಂಧಿತರನ್ನು ವಿಚಾರಣೆ ನಡೆಸಲಾಗುತ್ತಿದೆ. ಅವರು ಇದೇ ರೀತಿಯ ವನ್ಯಜೀವಿ ಕಳ್ಳಸಾಗಣೆ ದಂಧೆಯ ಭಾಗವಾಗಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳಲು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇತ್ತೀಚೆಗೆ ಒಡಿಶಾ ರಾಜ್ಯದಲ್ಲಿ ಚಿರತೆಗಳನ್ನು ಬೇಟೆಯಾಡುವುದು ಹೆಚ್ಚಾಗಿದೆ. ಇದು ಸಂರಕ್ಷಿತ ವನ್ಯಜೀವಿ ಪ್ರಭೇದಗಳಿಗೆ ಅಪಾಯವನ್ನುಂಟು ಮಾಡುತ್ತದೆ. ಕಳೆದ ಎರಡು ವರ್ಷಗಳಲ್ಲಿ ಪೊಲೀಸ್ ಮತ್ತು ಅರಣ್ಯ ಇಲಾಖೆಯ ಜಾರಿ ವಿಭಾಗದಿಂದ ಸುಮಾರು 40 ಚಿರತೆ ಚರ್ಮಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಇಲಾಖೆ ತಿಳಿಸಿದೆ.