alex Certify ʼಪ್ರಾಮಾಣಿಕತೆʼ ಇನ್ನೂ ಇದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಪ್ರಾಮಾಣಿಕತೆʼ ಇನ್ನೂ ಇದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ

ಭುವನೇಶ್ವರ: ರಸ್ತೆಯಲ್ಲಿ ಚೀಲವೊಂದು ಬಿದ್ದಿರುತ್ತದೆ, ಸುತ್ತಮುತ್ತ ಯಾರೂ ಇರುವುದಿಲ್ಲ. ಕುತೂಹಲದಿಂದ ತೆರೆದು ನೋಡಿದರೆ ಅದರ ತುಂಬ ಚಿನ್ನಾಭರಣಗಳೇ…!
ಇಂತಹ ಸಂದರ್ಭದಲ್ಲಿ ಎಂಥವರಾದರೂ ವಿಚಲಿತರಾಗುವುದು ಸಹಜ.

ಆದರೆ ವ್ಯಕ್ತಿಯೊಬ್ಬರು ಮಾಡಿರುವ ಕಾರ್ಯದಿಂದ ಪ್ರಾಮಾಣಿಕತೆ ಇನ್ನೂ ಇದೆ ಎಂಬುದಕ್ಕೆ ಸಾಕ್ಷಿಯಂತಿದೆ. ಪ್ರಾದೇಶಿಕ ಶೈಕ್ಷಣಿಕ ನಿರ್ದೇಶನಾಲಯದಲ್ಲಿ ಸಹಾಯಕರಾಗಿ ದುಡಿಯುತ್ತಿರುವ ತಪಶ್ಚಂದ್ರ ಸ್ವೈನ್ ಆ ಚೀಲವನ್ನು ಎತ್ತಿಕೊಂಡಿದ್ದಾರೆ. ಸ್ವಲ್ಪ ಹೊತ್ತು ಅಲ್ಲೇ ನಿಂತಿದ್ದು, ಅದರ ಮಾಲೀಕರು ಹುಡುಕಿಕೊಂಡು ಬರಬಹುದೇ ಎಂದು ಕಾದಿದ್ದಾರೆ. ಯಾರೂ ಬಂದಿಲ್ಲ. ಹಾಗಾಗಿ, ನೇರವಾಗಿ ಪೊಲೀಸ್ ಠಾಣೆಗೆ ತೆರಳಿ, ಅದನ್ನು ಪೊಲೀಸರ ಕೈಗಿತ್ತು, ಮಾಲೀಕರಿಗೆ ಅದನ್ನು ಮರಳಿಸುವಂತೆ ಮನವಿ ಮಾಡಿಕೊಂಡಿದ್ದಾರೆ.

Masked ʼಆಧಾರ್ʼ ಎಷ್ಟು ಸುರಕ್ಷಿತ….? ಡೌನ್ ಲೋಡ್ ಹೇಗೆ….? ಇಲ್ಲಿದೆ ಮಾಹಿತಿ

ಸ್ವಲ್ಪ ಹೊತ್ತಿನಲ್ಲಿ ಆ ಚೀಲದ ಮಾಲೀಕರು ಠಾಣೆಗೆ ಬಂದು, ಚಿನ್ನಾಭರಣವಿದ್ದ ಚೀಲ ಕಳೆದು ಹೋಗಿರುವುದಾಗಿ ದೂರು ಕೊಟ್ಟರು. ಪರಿಶೀಲನೆ ಬಳಿಕ ಮಾಲೀಕರು ನೀಡಿರುವ ವಿವರಗಳು ಸರಿ ಇವೆ ಎಂದು ಖಚಿತಪಡಿಸಿಕೊಂಡು ಪೊಲೀಸರು ಅದನ್ನು ಅವರಿಗೆ ಹಸ್ತಾಂತರಿಸಿದ್ದಾರೆ.

ಚಿನ್ನಾಭರಣಗಳಿದ್ದ ಚೀಲವನ್ನು ಠಾಣೆಗೆ ತಂದು ಕೊಟ್ಟು, ಅದು ಮಾಲೀಕರಿಗೆ ಸಿಗುವಂತೆ ಮಾಡಿದ ಪ್ರಾಮಾಣಿಕ ವ್ಯಕ್ತಿ ತಪಶ್ಚಂದ್ರ ಅವರನ್ನು ಸಂಭಲ್‌ಪುರ ಜಿಲ್ಲೆಯ ಎಸ್ಪಿ ಬಟ್ಟುಲಾ ಗಂಗಾಧರ್ ಸನ್ಮಾನಿಸಿ, ಪ್ರೋತ್ಸಾಹದ ರೂಪದಲ್ಲಿ 1,000 ರೂ. ಬಹುಮಾನವಿತ್ತರು.

“ಇಂತಹ ಶ್ರೇಷ್ಠ ಕಾರ್ಯವು ಗಮನಕ್ಕೆ ಬಂದಾಗ ಅದ್ಭುತವೆನಿಸಿತು. ತಪಶ್ಚಂದ್ರ ಅವರ ಪ್ರಾಮಾಣಿಕತೆಯನ್ನು ಕಂಡು ನಮಗೆಲ್ಲರಿಗೂ ಆಶ್ಚರ್ಯವೂ, ಹೆಮ್ಮೆಯೂ ಆಯಿತು. ಸುಮಾರು 20 ಲಕ್ಷ ರೂ.ಗಳಿಗೂ ಹೆಚ್ಚು ಮೌಲ್ಯದ ಚಿನ್ನಾಭರಣಗಳು ತುಂಬಿದ್ದ ಚೀಲವನ್ನು ಮರಳಿಸಿದ್ದನ್ನು ನೋಡಿ ಹೃದಯ ತುಂಬಿ ಬಂತು” ಎಂದು ಎಸ್ಪಿ ಪ್ರತಿಕ್ರಿಯಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...