ಭುವನೇಶ್ವರ: ದೇಶದಲ್ಲಿ ಅತ್ಯಂತ ಹೆಚ್ಚಿನ ಅವಧಿಗೆ ಸತತವಾಗಿ ಮುಖ್ಯಮಂತ್ರಿಯಾದ ಎರಡನೇ ಸಿಎಂ ಎಂಬ ಹೆಗ್ಗಳಿಕೆಗೆ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಭಾಜನರಾಗಿದ್ದಾರೆ.
ಅವರು 2005ರ ಮಾರ್ಚ್ 5 ರಿಂದ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ್ದು, ಒಟ್ಟು 23 ವರ್ಷ 139 ದಿನ ಒಡಿಶಾ ಮುಖ್ಯಮಂತ್ರಿಯಾಗಿದ್ದಾರೆ. ಈ ಮೂಲಕ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮತ್ತು ಕಮ್ಯುನಿಸ್ಟ್ ಪಕ್ಷದ ವರಿಷ್ಠರಾಗಿದ್ದ ಜ್ಯೋತಿ ಬಸು ಅವರ ಮುಖ್ಯಮಂತ್ರಿ ಸೇವಾ ಅವಧಿಯನ್ನು ನವೀನ್ ಪಟ್ನಾಯಕ್ ಮೀರಿಸಿದ್ದಾರೆ.
ಜ್ಯೋತಿ ಬಸು ಅವರು 1977ರ ಜೂನ್ 21ರಿಂದ 2000ದ ನವೆಂಬರ್ 5ರವರೆಗೆ ಒಟ್ಟು 23 ವರ್ಷ 137 ದಿನ ಮುಖ್ಯಮಂತ್ರಿ ಆಗಿದ್ದರು. ದೇಶದಲ್ಲಿ ಅತ್ಯಂತ ಗರಿಷ್ಠ ಅವಧಿಗೆ ಮುಖ್ಯಮಂತ್ರಿ ಆಗಿದ್ದ ದಾಖಲೆ ಸಿಕ್ಕಿಂ ಮಾಜಿ ಮುಖ್ಯಮಂತ್ರಿ ಪವನ್ ಕುಮಾರ್ ಛಾಮ್ ಲಿಂಗ್ ಅವರ ಹೆಸರಿನಲ್ಲಿದೆ. ಪವನ್ ಕುಮಾರ್ 1994ರ ಡಿಸೆಂಬರ್ 12 ರಿಂದ 2019 ರ ಮೇ 27ರವರೆಗೆ 24 ವರ್ಷಗಳಿಗೂ ಹೆಚ್ಚು ಕಾಲ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ.