
ಭಾರತದ ಆತಿಥ್ಯದಲ್ಲಿ ಜನವರಿ 13 ರಿಂದ ಒಡಿಶಾದಲ್ಲಿ ಹಾಕಿ ವಿಶ್ವಕಪ್ ಆರಂಭವಾಗಲಿದ್ದು, ಇದಕ್ಕಾಗಿ ಈಗಾಗಲೇ ಸಕಲ ಸಿದ್ಧತೆಗಳು ನಡೆದಿವೆ. ದೇಶದ ಅತಿ ದೊಡ್ಡ ಹಾಕಿ ಕ್ರೀಡಾಂಗಣ ಸಹ ಇದಕ್ಕಾಗಿ ಉದ್ಘಾಟನೆಗೊಂಡಿದೆ.
ರೂರ್ಕೆಲಾದಲ್ಲಿರುವ ಬಿರ್ಸಾ ಮುಂಡ ಅಂತರಾಷ್ಟ್ರೀಯ ಕ್ರೀಡಾಂಗಣವನ್ನು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಗುರುವಾರ ಉದ್ಘಾಟಿಸಿದ್ದು, ಈ ವೇಳೆ ಭಾರತೀಯ ಆಟಗಾರರಿಗೆ ಬಂಪರ್ ಕೊಡುಗೆ ಘೋಷಿಸಿದ್ದಾರೆ.
ಈ ವಿಶ್ವ ಕಪ್ ನಲ್ಲಿ ಭಾರತ ಹಾಕಿ ತಂಡ ಗೆದ್ದರೆ ಪ್ರತಿ ಆಟಗಾರನಿಗೆ ತಲಾ ಒಂದು ಕೋಟಿ ರೂಪಾಯಿ ಬಹುಮಾನ ನೀಡುವುದಾಗಿ ನವೀನ್ ಪಟ್ನಾಯಕ್ ಘೋಷಿಸಿದ್ದಾರೆ. 1975 ರಲ್ಲಿ ಭಾರತ ವಿಶ್ವ ಕಪ್ ಗೆದ್ದಿದ್ದು ಆ ಬಳಿಕ ಗೆಲವು ಸಾಧಿಸಿಲ್ಲ.